ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ವಿಧಾನಸಭೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಬಿಜೆಪಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
ಬೆಂಗಳೂರಿನ ಶಾಂಗ್ರಿ ಲಾ ಹೊಟೇಲ್‌ನಲ್ಲಿ ಕಾರ್ಯಕ್ರಮ ನಡೆದಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ರಾಜ್ಯದ 224 ತಜ್ಞರ ಅಭಿಪ್ರಾಯ ಪಡೆದು ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗಿದೆ. ಇದು ಜನಪರ ಪ್ರಣಾಳಿಕೆ, ಜನರಿಗೆ ಸರ್ಕಾರ ಏನೆಲ್ಲಾ ಒಳ್ಳೆಯದನ್ನು ಮಾಡಲು ಸಾಧ್ಯವೋ ಅಷ್ಟೂ ಮಾಡಿದ್ದೇವೆ ಎಂದು ನಡ್ಡಾ ಹೇಳಿದ್ದಾರೆ.
ಅಟಲ್ ಆಹಾರ ಕೇಂದ್ರ ಸ್ಥಾಪನೆ, ಬಿಪಿಎಲ್ ಕುಟುಂಬಗಳಿಗೆ ಮೂರು ಉಚಿತ ಗ್ಯಾಸ್. ಬಿಪಿಎಲ್ ಕುಟುಂಬಗಳಿಗೆ ನಿತ್ಯ ಅರ್ಧ ಲೀಟರ್ ಹಾಲು, ಸರ್ಕಾರಿ ಶಾಲೆಗಳ ಉನ್ನತೀಕರಣ ಹೀಗೆ ಸಾಕಷ್ಟು ವಿಷಯಗಳು ಪ್ರಣಾಳಿಕೆಯಲ್ಲಿದೆ.
#WATCH | BJP national president JP Nadda releases party's vision document/manifesto for Karnataka elections in Bengaluru. pic.twitter.com/qm2wyGdppZ
— ANI (@ANI) May 1, 2023