Friday, June 2, 2023

Latest Posts

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ವಿರುದ್ಧ ಸಮರ ಸಾರಿದ ಕೇಂದ್ರ: 14 ಅಪ್ಲಿಕೇಶನ್‌ಗಳು ಬ್ಯಾನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಗುಪ್ತಚರ ಸಂಸ್ಥೆಗಳಿಂದ ಮಾಹಿತಿ ಪಡೆದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಹರಡಲು ಹೆಚ್ಚಾಗಿ ಬಳಸುತ್ತಿದ್ದ 14 ಮೆಸೆಂಜರ್ ಮೊಬೈಲ್ ಅಪ್ಲಿಕೇಶನ್‌ಗಳನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ. ಈ ಆ್ಯಪ್‌ಗಳಲ್ಲಿ ಕ್ರಿಪ್‌ವೈಸರ್, ಎನಿಗ್ಮಾ, ಸೇಫ್ಸ್ವಿಸ್, ವಿಕ್ರ್ಮೆ, ಮೀಡಿಯಾಫೈರ್, ಬ್ರಿಯಾರ್, ಬಿಚಾಟ್, ನಂಡ್‌ಬಾಕ್ಸ್, ಕೊನಿಯನ್, ಐಎಂಒ, ಎಲಿಮೆಂಟ್, ಸೆಕೆಂಡ್ ಲೈನ್, ಝಾಂಗಿ, ಥ್ರೀಮಾ ಸೇರಿವೆ.

ಈ ಮೊಬೈಲ್ ಅಪ್ಲಿಕೇಶನ್‌ಗಳನ್ನು ಕಾಶ್ಮೀರದ ಭಯೋತ್ಪಾದಕರು ತಮ್ಮ ಬೆಂಬಲಿಗರೊಂದಿಗೆ ಸಂವಹನ ನಡೆಸಲು ಬಳಸುತ್ತಿದ್ದರು. ಓವರ್‌ಗ್ರೌಂಡ್ ವರ್ಕರ್ಸ್ (OGWs) ಮತ್ತು ಭಯೋತ್ಪಾದಕರು ತಮ್ಮ ನಡುವೆ ಸಂವಹನ ನಡೆಸಲು ಬಳಸುವ ಅಪ್ಲಿಕೇಶನ್‌ಗಳನ್ನು ಏಜೆನ್ಸಿಗಳು ಟ್ರ್ಯಾಕ್ ಮಾಡುತ್ತವೆ ಎಂದು ಗುಪ್ತಚರ ಸಂಸ್ಥೆ ತಿಳಿಸಿದೆ.

ಕಣಿವೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇತರ ಗುಪ್ತಚರ ಸಂಸ್ಥೆಗಳ ಸಹಾಯದಿಂದ, ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟುಮಾಡುವ ಮತ್ತು ಭಾರತೀಯ ಕಾನೂನುಗಳನ್ನು ಅನುಸರಿಸದ ಅಂತಹ ಅಪ್ಲಿಕೇಶನ್‌ಗಳ ಪಟ್ಟಿಯನ್ನು ಸಿದ್ಧಪಡಿಸಲಾಯಿತು. ಪಟ್ಟಿಯನ್ನು ಸಿದ್ಧಪಡಿಸಿದ ನಂತರ, ಈ ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸುವ ವಿನಂತಿಯನ್ನು ಸಂಬಂಧಿಸಿದ ಸಚಿವಾಲಯಕ್ಕೆ ತಿಳಿಸಲಾಯಿತು. ಬಳಿಕ ಆ್ಯಪ್‌ಗಳನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 69ಎ ಅಡಿಯಲ್ಲಿ ನಿರ್ಬಂಧಿಸಲಾಗಿದೆ.

ಉನ್ನತ ಅಧಿಕಾರಿಗಳಿಗೆ ಅಧಿಕೃತ ಸಂವಹನದಲ್ಲಿ, ಈ ಅಪ್ಲಿಕೇಶನ್‌ಗಳು ಕಣಿವೆಯಲ್ಲಿ ಭಯೋತ್ಪಾದಕ ಪ್ರಚಾರವನ್ನು ಹರಡುತ್ತಿವೆ ಎಂದು ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!