ಉಪಚುನಾವಣೆ ಫಲಿತಾಂಶ 2022: ಇಂದು 6 ರಾಜ್ಯಗಳ 7 ವಿಧಾನಸಭಾ ಸ್ಥಾನಗಳ ಮತ ಎಣಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆರು ರಾಜ್ಯಗಳ ಏಳು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದೆ. ಭಾರತೀಯ ಜನತಾ ಪಕ್ಷ ಮತ್ತು ಪ್ರಾದೇಶಿಕ ಪಕ್ಷಗಳಾದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್), ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ), ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಬಿಜು ಜನತಾ ದಳ (ಬಿಜೆಡಿ) ನಡುವೆ ತೀವ್ರ ಹೋರಾಟ ನಡೆಯುತ್ತಿದೆ.

ನವೆಂಬರ್ 3 ರಂದು ಬಿಹಾರದ ಮೊಕಾಮಾ ಮತ್ತು ಗೋಪಾಲ್‌ಗಂಜ್ ವಿಧಾನಸಭಾ ಕ್ಷೇತ್ರಗಳು, ಮಹಾರಾಷ್ಟ್ರದ ಅಂಧೇರಿ (ಪೂರ್ವ), ಹರಿಯಾಣದ ಆದಂಪುರ, ತೆಲಂಗಾಣದ ಮುನುಗೋಡ, ಉತ್ತರ ಪ್ರದೇಶದ ಗೋಲಾ ಗೋಕರನಾಥ್ ಮತ್ತು ಒಡಿಶಾದ ಧಮ್‌ನಗರದಲ್ಲಿ ಮತದಾನ ನಡೆದಿತ್ತು. ಉಪಚುನಾವಣೆ ನಡೆದ ಏಳು ಸ್ಥಾನಗಳ ಪೈಕಿ ಬಿಜೆಪಿ ಮೂರು, ಕಾಂಗ್ರೆಸ್ ಎರಡು ಸ್ಥಾನಗಳನ್ನು ಹೊಂದಿದ್ದರೆ, ಶಿವಸೇನೆ ಮತ್ತು ಆರ್‌ಜೆಡಿ ತಲಾ ಒಂದು ಸ್ಥಾನ ಇವೆ.

ಚುನಾವಣಾ ಆಯೋಗದ ಪ್ರಕಾರ ಆರು ರಾಜ್ಯಗಳಾದ್ಯಂತ ನಡೆದ ವಿಧಾನಸಭಾ ಉಪಚುನಾವಣೆಯಲ್ಲಿ, ತೆಲಂಗಾಣದ ಮುನುಗೋಡ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾನವಾಗಿದೆ. ಗೋಪಾಲ್‌ಗಂಜ್ ಕ್ಷೇತ್ರದಲ್ಲಿ 48.35 ರಷ್ಟು ಮತದಾನವಾಗಿದ್ದರೆ, ಬಿಹಾರದ ಮೊಕಾಮಾದಲ್ಲಿ ಶೇಕಡಾ 52.47 ರಷ್ಟು ಮತದಾನವಾಗಿದೆ. ಹರಿಯಾಣದ ಆದಂಪುರ ಕ್ಷೇತ್ರದಲ್ಲಿ ಶೇ.75.25ರಷ್ಟು ಮತ್ತು ತೆಲಂಗಾಣದ ಮುನುಗೋಡೆಯಲ್ಲಿ ಅತಿ ಹೆಚ್ಚು 77.55 ರಷ್ಟು ಮತದಾನವಾಗಿದೆ. ಒಡಿಶಾದ ಧಮ್‌ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಶೇಕಡಾ 66.63 ರಷ್ಟು, ಉತ್ತರ ಪ್ರದೇಶದ ಗೋಲ ಗೋಕ್ರನಾಥ ಕ್ಷೇತ್ರದಲ್ಲಿ ಶೇ.55.68 ರಷ್ಟು, ಮಹಾರಾಷ್ಟ್ರದ ಅಂಧೇರಿ ಪೂರ್ವ ಕ್ಷೇತ್ರದಲ್ಲಿ 31.74 ರಷ್ಟು ಕಡಿಮೆ ಮತದಾನವಾಗಿತ್ತು.

ಇಂದು 6 ರಾಜ್ಯಗಳ 7 ವಿಧಾನಸಭಾ ಅಭ್ಯರ್ಥಿಗಳ ಭವಿಷ್ಯ ಹೊರಬೀಳಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!