ಕಾಂಗ್ರೆಸ್-ಬಿಜೆಪಿ ಒಂದೇ ಮರದ ಎರಡು ಹಕ್ಕಿಗಳು: ಸಿ.ಎಂ.ಇಬ್ರಾಹಿಂ

ಹೊಸದಿಗಂತ ವರದಿ ಕಲಬುರಗಿ:

ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ಮರದ ಎರಡು ಹಕ್ಕಿಗಳು, ಜೆಡಿಎಸ್ ಬಡವರ ಪಕ್ಷವಾಗಿದ್ದು, ಇಲ್ಲಿ ಅಭ್ಯರ್ಥಿಗಳು ಸಹ ಬಡವರೇ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷದ ಯಾವುದೇ ನಾಯಕರು ಜೈಲಿನಲ್ಲಿಲ್ಲ. ಹಾಗೂ ಬೆಲ್ ನಿಂದ ಕೂಡ ಯಾರು ಹೊರ ಬಂದಿಲ್ಲ. ಆದರೆ, ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಜೈಲಿಗೆ ಹೋಗಿ ಬಂದಿದ್ದಾರೆ ಎಂದರು. ಪಂಚರತ್ನ ಯಾತ್ರೆ ಕನಾ೯ಟಕದ ಇತಿಹಾಸದಲ್ಲಿ ಜಾತಿ ಸಂಕೋಲೆ ಮುರಿದು ಸಾವಿರಾರು ಸಂಖ್ಯೆಯಲ್ಲಿ ಸ್ವಾಗತ ಮಾಡುತ್ತಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಗೆ ಇರುವ ವ್ಯತ್ಯಾಸ ಎಂದರೆ,ಅವರು ಜನರನ್ನು ಕರೆಸುತ್ತಾರೆ. ನಾವು ಜನ ಇದ್ದಲ್ಲಿ ಹೋಗುತ್ತಿದ್ದೇವೆ ಎಂದರು.

ಕಾಂಗ್ರೆಸ್ ಪಕ್ಷದವರು ಎಸಿ ಬಸ್ಸಿನಲ್ಲಿ ತಿರುಗಾಟ ನಡೆಸಿದರೆ, ಬಿಜೆಪಿ ಪಕ್ಷದವರು ಹೆಲಿಕಾಪ್ಟರ್ ಮೂಲಕ ತಿರುಗಾಟ ನಡೆಸಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಗೆ ಜನರ ಸಮಸ್ಯೆ ಬೇಕಾಗಿಲ್ಲ ಎಂದು ಹೇಳಿದರು. ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದು ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದು ಖಚಿತ.ಈ ಮಾತನ್ನು ನನ್ನ ರಾಜಕೀಯ ಅನುಭವದ ಆಧಾರದ ಮೇಲೆ ಹೇಳುತ್ತಿದ್ದೇನೆ ಎಂದರು.

ಕುಮಾರಸ್ವಾಮಿ ಒಂದು ವೇಳೆ ಸಿಎಂ ಆಗದಿದ್ದರೆ, ರಾಜಕೀಯ ರಾಜೀನಾಮೆ ನೀಡುತ್ತೇನೆ ಎಂದು ಈಗಾಗಲೇ ಹೇಳಿದ್ದೇನೆ ಎಂದು ಹೇಳಿದರು. ಕುಮಾರಸ್ವಾಮಿ ಅವರ ಸಕಾ೯ರ ಬಿಳಿಸಿದವರು ಯಾರು ಎಂದು ಇದೇ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಗೆ ಪ್ರಶ್ನೆ ಮಾಡಿದ ಅವರು,ಬಹಿರಂಗ ಚಚೆ೯ಗೆ ಬರುವುದಾದರೆ ಬನ್ನಿ ಎಂದು ಸವಾಲು ಹಾಕಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!