ಆಹಾರ ಬಿಕ್ಕಟ್ಟೊಂದೇ ಅಲ್ಲ..ಬಲೂಚಿಸ್ತಾನದಲ್ಲಿ ನೀರಿಗೂ ತತ್ವಾರ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಒಂದೆಡೆ ಉಗ್ರ ಉಪಟಳ ಇನ್ನೊಂದೆಡೆ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸುತ್ತಿರುವ ಪಾಕಿಸ್ತಾನದಲ್ಲಿ ತೀವ್ರ ಆಹಾರ ಬಿಕ್ಕಟ್ಟು ಎದುರಾಗಿದೆ. ಗೋಧಿ, ಬೇಳೆಕಾಳುಗಳು, ಅಡುಗೆ ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು ಜನಸಾಮಾನ್ಯರು ತಿನ್ನಲು ಆಹಾರವಿಲ್ಲದೇ ಪರಿತಪಿಸುತ್ತಿದ್ದಾರೆ. ಆದರೆ ಇವೆಲ್ಲದರ ನಡುವೆಯೇ ಪಾಕಿಸ್ತಾನದ ಪ್ರಮುಖ ಪ್ರದೇಶಗಳಲ್ಲೊಂದಾದ ಬಲೂಚಿಸ್ತಾನದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಆರಂಭವಾಗಿದೆ.

ಬಲೂಚಿಸ್ತಾನದ ಪ್ರಮುಖ ಪ್ರದೇಶಗಳು ಕುಡಿಯುವ ನೀರಿನ ತೀವ್ರ ಕೊರತೆಯಿಂದ ಬಳಲುತ್ತಿವೆ. ಕುಡಿಯುವ ನೀರಿನ ಸರಬರಾಜಿಗೆಂದು ಸ್ಥಾಪಿಸಲ್ಪಟ್ಟ ನೀರಿನ ಘಟಕಗಳು ಸರಿಯಾದ ನಿರ್ವಹಣೆಯಿಲ್ಲದೇ ಕೆಟ್ಟು ಹೋಗಿದ್ದು ಜನರಿಗೆ ಸರಿಯಾದ ಕುಡಿಯುವ ನೀರು ಲಭ್ಯವಾಗುತ್ತಿಲ್ಲ. ವಿಸ್ತಾರವಾದ ಬಲೂಚಿಸ್ತಾನದ ಒಟ್ಟಾರೆ ನಿವಾಸಿಗಳಲ್ಲಿ ಕೇವಲ 25 ಪ್ರತಿಶತದಷ್ಟು ಜನರಿಗೆ ಮಾತ್ರ ಶುದ್ಧ ಕುಡಿಯುವ ಸಿಗುತ್ತಿದೆ. ಉಳಿದವರು ನೀರಿನ ಕೊರತೆ ಅನುಭವಿಸುತ್ತಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಆಡಳಿತ ಸರ್ಕಾರವು ಕೂಡಲೇ ನೀರಿನ ಘಟಕಗಳನ್ನು ಸರಿಪಡಿಸುವುದಾಗಿ ಹೇಳಿದೆಯಾದರೂ ಇತರ ರಾಷ್ಟ್ರೀಯ ಸಮಸ್ಯೆಗಳನ್ನು ಎದುರಿಸಲು ಸರ್ಕಾರ ಹೆಣಗಾಡುತ್ತಿರುವುಯದರಿಂದ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ದೂರವಾಗುವ ಭರವಸೆ ಜನರಿಗಿಲ್ಲ ಎನ್ನಲಾಗಿದೆ.

ಹಣದುಬ್ಬರವು ದೇಶದಲ್ಲಿ ಅಭೂತಪೂರ್ವ ಮಟ್ಟದಲ್ಲಿ ಏರುತ್ತಿದ್ದು ಇಂಧನ ಮತ್ತು ಅಗತ್ಯ ಆಹಾರ ಪದಾರ್ಥಗಳಾದ ಹಿಟ್ಟು, ಅಕ್ಕಿ ಮತ್ತು ಸಕ್ಕರೆಯ ಬೆಲೆಗಳಲ್ಲಿ ತೀವ್ರ ಏರಿಕೆಯಾಗಿದೆ. ಕೆಲವು ಮೂಲ ತರಕಾರಿಗಳ ಬೆಲೆಗಳಲ್ಲಿ 500 ಪ್ರತಿಶತದಷ್ಟು ಏರಿಕೆಯಾಗಿದೆ. ಇವೆಲ್ಲವುಗಳ ನಡುವೆ ನೀರಿನ ಕೊರತೆಯೂ ಬಲೂಚಿಸ್ತಾನವನ್ನು ಬಾಧಿಸುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!