ಸಿಎಎ ವಾಪಸ್, ಎನ್ಆರ್‌ಸಿ ನಿಷೇಧ, 10 ಉಚಿತ ಎಲ್‌ಪಿಜಿ ಸಿಲಿಂಡರ್‌: ಇದು ಟಿಎಂಸಿ ಗ್ಯಾರಂಟಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಲೋಕಸಭಾ ಚುನಾವಣಾ ಕಾವು ಏರತೊಡಗಿದೆ.ಇದರ ನಡುವೆ ವಿವಿಧ ಪಕ್ಷಗಳು ಮತದಾರರ ಸೆಳೆಯಲು ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿದೆ. ಇದೀಗ ತೃಣಮೂಲ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದೆ.

ತಾವು ಅಧಿಕಾರಕ್ಕೆ ಬಂದರೆ ಕೇಂದ್ರ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಸಿಎಎ ವಾಪಸ್ ಪಡೆಯುವುದಾಗಿ ಹೇಳಿದೆ.ಜೊತೆಗೆ ಎನ್ಆರ್‌ಸಿಗೆ ನಿಷೇಧ ಹೇರುವುದಾಗಿ ಟಿಎಂಸಿ ಹೇಳಿದೆ.

ಇಂಗ್ಲೀಷ್, ಬಂಗಾಳಿ ಸೇರಿದಂತೆ 7 ಪ್ರಮುಖ ಭಾಷೆಗಳಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಈ ಪೈಕಿ ನೇಪಾಳಿ ಹಾಗೂ ಸಂತಾಲ್ ಭಾಷೆಯೂ ಸೇರಿದೆ.

ಹೇಗಿದೆ ನೋಡಿ ಪ್ರಣಾಳಿಕೆ …

  • ಕೂಲಿ ಕಾರ್ಮಿಕರಿಗೆ ಕನಿಷ್ಟ 100 ದಿನ ಕೆಲಸ ಹಾಗೂ ಪ್ರತಿ ದಿನದ ವೇತವನ್ನು 400 ರೂಪಾಯಿಗೆ ಏರಿಕೆ
  • ಎಲ್ಲಾ ಬಡವರಿಗೆ ಸಂಪೂರ್ಣ ಉಚಿತ ಮನೆ ಯೋಜನೆ
  • BPL ಕುಟುಂಬಸ್ಥರಿಗೆ ವಾರ್ಷಿಕ 10 ಗ್ಯಾಸ್ ಸಿಲಿಂಡರ್ ಉಚಿತ
  • ಪಡಿತರ ಚೀಟಿ ಹೊಂದಿದ ಕುಟುಂಬಗಳ ಮನೆ ಬಾಗಿಲಿಗೆ ಪಡಿತರ ವಿತರಣೆ
  • SC/ST ಸಮುದಾಯದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಭತ್ಯೆ ಹೆಚ್ಚಳ, ಹಿರಿಯ ನಾಗರೀಕರ ಮಾಸಿಕ ಭತ್ಯೆ 1,000 ರೂಪಾಯಿಗೆ ಏರಿಕೆ
  • ತ್ವರಿತವಾಗಿ ಸ್ವಾಮಿನಾಥನ್ ಕಮಿಷನ್ ನೀಡಿದ ಶಿಫಾರಸುಗಳನ್ನು ಜಾರಿ
  • ಇಂಡಸ್ಟ್ರಿಯಲ್‌ನ ಪೆಟ್ರೋ ಉತ್ಪನ್ನಗಳಿಗೆ ಆರ್ಥಿಕ ನೆರವು
  • 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪದವೀಧರ ಹಾಗೂ ಡಿಪ್ಲೋಮಾ ಪದವಿ ಪಡೆದವರಿಗೆ ಆರ್ಥಿಕ ನೆರವು
  • ಸಿಎಎ ವಾಪಸ್ ಮಾಡಲಾಗುತ್ತದೆ, ಎನ್ಆರ್‌ಸಿ ಜಾರಿಗೆ ತಡೆ ನೀಡಲಾಗುತ್ತದೆ. ಇದೇ ವೇಳೆ ಏಕರೂಪ ನಾಗರೀಕ ಸಂಹಿತೆ ಜಾರಿಗೆ ಅವಕಾಶವಿಲ್ಲ
  • ದೇಶಾದ್ಯಂತ ಹೆಣ್ಣುಮಕ್ಕಳ ಸಬಲೀಕರಣಕ್ಕೆ ಕನ್ಯಾಶ್ರೀ ಯೋಜನೆ ಆರಂಭ

ಹಲವು ಭರವಸೆಗಳ ತೃಣಮೂಲ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆಯಾಗಿದೆ. ಇದೇ ವೇಳೆ ಮಾತನಾಡಿರುವ ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳದಲ್ಲಿ ಇಂಡಿಯಾ ಒಕ್ಕೂಟದ ಜೊತೆಗೆ ಯಾವುದೇ ಮೈತ್ರಿ ಇಲ್ಲ , ಟಿಎಂಸಿ ಏಕಾಂಗಿಯಾಗಿ ಹೋರಾಡಲಿದೆ. ಆದರೆ ದೇಶಾದ್ಯಂತ ಟಿಎಂಸಿ ಬಿಜೆಪಿ ದೂರವಿಡಲು ಇಂಡಿಯಾ ಮೈತ್ರಿಗೆ ಬೆಂಬಲ ನೀಡಲಿದೆ ಎಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!