September 27, 2026
Sunday, September 27, 2026
spot_img

Cabbage Roll | ಕ್ಯಾಬೇಜ್ ಇಷ್ಟ ಇಲ್ಲ ಎನ್ನುವವರೂ ಕೂಡ ಕೇಳಿ ತಿನ್ನುವ ರೆಸಿಪಿ ಇದು

ಎಲೆಕೋಸಿನಿಂದ ತಯಾರಿಸುವ ಕ್ಯಾಬೇಜ್ ರೋಲ್ ಒಂದು ಆರೋಗ್ಯಕರ ಹಾಗೂ ರುಚಿಕರವಾದ ಸ್ನ್ಯಾಕ್‌. ಎಲೆಕೋಸಿನ ಎಲೆಗಳೊಳಗೆ ತರಕಾರಿ ಹೂರಣ ತುಂಬಿ ಸ್ಟೀಮ್ ಮಾಡುವ ಈ ರೆಸಿಪಿಯಲ್ಲಿ ಎಣ್ಣೆ ಬಳಕೆ ಕಡಿಮೆ ಇರುವುದರಿಂದ ಆರೋಗ್ಯಕ್ಕೂ ಉತ್ತಮ.

ಬೇಕಾಗುವ ಸಾಮಗ್ರಿಗಳು:

ಎಲೆಕೋಸು – 1 ಮಧ್ಯಮ ಗಾತ್ರದ
ಬೇಯಿಸಿದ ಅನ್ನ – 1 ಕಪ್
ಕ್ಯಾರೆಟ್ (ತುರಿದದ್ದು) – ½ ಕಪ್
ಕ್ಯಾಪ್ಸಿಕಂ – ¼ ಕಪ್
ಈರುಳ್ಳಿ – 1
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಕಾಳುಮೆಣಸಿನ ಪುಡಿ – ½ ಟೀಸ್ಪೂನ್
ಖಾರದ ಪುಡಿ – ½ ಟೀಸ್ಪೂನ್ (ಐಚ್ಛಿಕ)
ಗರಂ ಮಸಾಲೆ – ½ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 1 ಟೇಬಲ್ ಸ್ಪೂನ್

ಮಾಡುವ ವಿಧಾನ:

ಒಂದು ಪಾತ್ರೆಯಲ್ಲಿ ನೀರು ಕುದಿಸಿ. ಅದರಲ್ಲಿ ಸಂಪೂರ್ಣ ಎಲೆಕೋಸನ್ನು ಸುಮಾರು 2 ನಿಮಿಷಗಳ ಕಾಲ ಮುಳುಗಿಸಿ. ನಂತರ ಎಲೆಗಳನ್ನು ನಿಧಾನವಾಗಿ ಬೇರ್ಪಡಿಸಿ. ದಪ್ಪವಾದ ಕಾಂಡದ ಭಾಗವನ್ನು ಚಾಕುವಿನಿಂದ ಸ್ವಲ್ಪ ಕತ್ತರಿಸಿ ಸಮಗೊಳಿಸಿ.

ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಈರುಳ್ಳಿ ಹಾಕಿ ಬಾಡಿಸಿ. ಬಳಿಕ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ನಂತರ ಕ್ಯಾರೆಟ್, ಕ್ಯಾಪ್ಸಿಕಂ ಸೇರಿಸಿ 2–3 ನಿಮಿಷ ಹುರಿಯಿರಿ. ಈಗ ಬೇಯಿಸಿದ ಅನ್ನ, ಉಪ್ಪು, ಕಾಳುಮೆಣಸಿನ ಪುಡಿ, ಖಾರದ ಪುಡಿ ಹಾಗೂ ಗರಂ ಮಸಾಲೆ ಸೇರಿಸಿ ಚೆನ್ನಾಗಿ ಕಲಸಿ. ಹೂರಣ ಸಿದ್ಧ.

ಎಲೆಕೋಸಿನ ಎಲೆಯನ್ನು ಹರಡಿ ಅದರ ಮಧ್ಯದಲ್ಲಿ 2 ಚಮಚ ಹೂರಣ ಇಡಿ. ಎರಡೂ ಬದಿಗಳನ್ನು ಒಳಗೆ ಮಡಚಿ ಸ್ಪ್ರಿಂಗ್ ರೋಲ್ ರೀತಿಯಲ್ಲಿ ಬಿಗಿಯಾಗಿ ಸುತ್ತಿ.

ಸಿದ್ಧಪಡಿಸಿದ ರೋಲ್‌ಗಳನ್ನು ಸ್ಟೀಮರ್‌ನಲ್ಲಿ 10–15 ನಿಮಿಷಗಳ ಕಾಲ ಬೇಯಿಸಿ. ಬೇಕಿದ್ದರೆ ಸ್ವಲ್ಪ ಟೊಮೆಟೊ ಸಾಸ್‌ನೊಂದಿಗೆ ಪ್ಯಾನ್‌ನಲ್ಲಿ 3–4 ನಿಮಿಷ ಬೇಯಿಸಿ ಬಡಿಸಬಹುದು.

Must Read