ವಿಮಾನದಲ್ಲಿ ನೀಡಿದ ಆಹಾರದಲ್ಲಿ ಹಾವಿನ ತಲೆ: ಬೆಚ್ಚಿಬಿದ್ದ ಸಿಬ್ಬಂದಿ, ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಮಾನದಲ್ಲಿ ಗಗನಸಖಿ ಸಪ್ಲೈ ಮಾಡಿದ ಆಹಾರದಲ್ಲಿ ಹಾವಿನ ತಲೆ ಕಂಡು ಪ್ರಯಾಣಿಕ ಬೆಚ್ಚಿಬಿದ್ದು, ಜೋರಾಗಿ ಕೂಗಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.‌

ಜುಲೈ 21 ರಂದು ಟರ್ಕಿಯ ಅಂಕಾರಾದಿಂದ ಜರ್ಮನಿಯ ಡಸೆಲ್ಡಾರ್ಫ್‌ಗೆ ಹೊರಟಿದ್ದ ಸನ್ ಎಕ್ಸ್‌ಪ್ರೆಸ್ ವಿಮಾನದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.  ಊಟ ಮಾಡುತ್ತಿದ್ದ ಕ್ಯಾಬಿನ್ ಸಿಬ್ಬಂದಿಗೆ ಆಲೂಗಡ್ಡೆ ಮತ್ತು ತರಕಾರಿಗಳ ನಡುವೆ ಕತ್ತರಿಸಿದ ಹಾವಿನ ತಲೆಯನ್ನು ಕಂಡಿದೆ. ಕೂಡಲೇ ಆತ ಭಯದಿಂದ ಚೀರಿದ್ದಾನೆ.

ವೈರಲ್‌ ಆಗಿರುವ ವಿಡಿಯೋದಲ್ಲಿ ಹಾವಿನ ತಲೆಯು ಸ್ಪಷ್ಟವಾಗಿ ಗೋಚರಿಸುತ್ತಿದೆ. ಘಟನೆ ಕುರಿತು  ವಿಮಾನಯಾನ ಸಂಸ್ಥೆ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡಿದ್ದೇವೆ. ಇಂತಹ ಘಟನೆಗಳು ಮರುಕಳಿಸದಂತೆ ಆಹಾರ ಸರಬರಾಜು ಮಾಡುವ ಕೇಟರಿಂಗ್ ಸಂಸ್ಥೆಯೊಂದಿಗಿನ ಒಪ್ಪಂದವನ್ನು ತಡೆಹಿಡಿಯಲಾಗಿದೆ ಎಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!