ಹೊಸದಿಗಂತ ಡಿಜಿಟಲ್ ಡೆಸ್ಕ್
ದಕ್ಷಿಣ ಸೊಮಾಲಿಯಾದಲ್ಲಿ ಸರ್ಕಾರಿ ಕಟ್ಟಡದ ಪ್ರವೇಶದ್ವಾರದಲ್ಲಿ ಆತ್ಮಹತ್ಯಾ ಬಾಂಬರ್ ಒಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡ ಪರಿಣಾಮ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ.
ದಾಳಿಯಲ್ಲಿ ಕೊಲ್ಲಲ್ಪಟ್ಟವರಲ್ಲಿ ಜಿಲ್ಲಾಧಿಕಾರಿ ಅಬ್ದುಲ್ಲಾಹಿ ಅಲಿ ವಾಫೌ ಕೂಡ ಸೇರಿದ್ದಾರೆ ಎಂದು ಲೋವರ್ ಶಾಬೆಲ್ಲೆ ಪ್ರದೇಶದ ಮಾರ್ಕಾ ಪಟ್ಟಣದ ಆಡಳಿತದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಒಸ್ಮಾನ್ ಯಾರಿಸೊವ್ ಹೇಳಿದ್ದಾರೆ. “ಜಿಲ್ಲಾ ಕೇಂದ್ರದಲ್ಲಿ ಸಭೆಯನ್ನು ಮುಗಿಸಿ ಹೊರಹೋಗುತ್ತಿರುವ ಕೆಲವೇ ನಿಮಿಷಗಳಲ್ಲಿ, ದೊಡ್ಡ ಸ್ಫೋಟದ ಸದ್ದೊಂದು ಕೇಳಿಸಿತು. ಅಪರಿಚಿತ ವ್ಯಕ್ತಿಯೊಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದ. ಘಟನೆಯಲ್ಲಿ ಆಯುಕ್ತರ ಅಂಗರಕ್ಷಕರು, ಹಿರಿಯರು ಮತ್ತು ಮಹಿಳೆಯರು ಕೊಲ್ಲಲ್ಪಟ್ಟರು ಎಂದು ಯಾರಿಸೊವ್ ತಿಳಿಸಿದ್ದಾರೆ.
ಸೋಮಾಲಿಯಾ ಮೂಲದ ಉಗ್ರಗಾಮಿ ಗುಂಪು ಅಲ್-ಶಬಾಬ್ ದಾಳಿಯ ಹೊಣೆ ಹೊತ್ತುಕೊಂಡಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ