ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವ ದೇಗುಲಗಳಲ್ಲಿ ಕಾಲ್ ಸೆಂಟರ್ ಪ್ರಾರಂಭಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.
ಒಟ್ಟಾರೆ 34,000 ದೇವಾಲಯಗಳಲ್ಲಿ ಭಕ್ತರ ಸಹಾಯಕ್ಕಾಗಿ ಕಾಲ್ ಸೆಂಟರ್‌ಗಳನ್ನು ಪ್ರಾರಂಭ ಮಾಡಿ, ದೇಗುಲ ಕುರಿತ ಎಲ್ಲ ರೀತಿಯ ಮಾಹಿತಿ ಒದಗಿಸಲಾಗುತ್ತದೆ.
ದೇವಾಲಯದ ಆಚರಣೆಗಳು, ವಾರ ಹುಣ್ಣಿಮೆಗಳು, ದೇಗುಲ ತೆರೆಯುವ ಹಾಗೂ ಮುಚ್ಚುವ ಸಮಯ, ದಿನ ಮತ್ತು ದಿನಾಂಕ, ದೇಗುಲದ ಪೂಜಾ ಸಮಯ, ದೇಗುಲದ ಅಡ್ರೆಸ್ ಹೀಗೆ ಹೆಚ್ಚಿನ ಮಾಹಿತಿಯನ್ನು ಒದಗಿಸಲಾಗುತ್ತದೆ.