Sunday, December 3, 2023

Latest Posts

RECIPE| ಯಮ್ಮೀ ಬ್ರೇಕ್‌ಫಾಸ್ಟ್‌ಗಾಗಿ ಸ್ವೀಟ್‌ ಕಾರ್ನ್‌ ಪರೋಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೇಕಾಗುವ ಸಾಮಾಗ್ರಿಗಳು:

ಮೈದಾ
ಜೋಳ
ಈರುಳ್ಳಿ
ಆಲೂಗಡ್ಡೆ
ಕೊತ್ತಂಬರಿ ಸೊಪ್ಪು
ಖಾರದ ಪುಡಿ
ಉಪ್ಪು
ನೀರು
ಎಣ್ಣೆ

ಮಾಡುವ ವಿಧಾನ:

* ಮೊದಲು ಜೋಳ, ಆಲೂಗಡ್ಡೆಯನ್ನು ಬೇಯಿಸಿಕೊಳ್ಳಿ.
* ನಂತರ ಪ್ಯಾನ್ ತೆಗೆದುಕೊಂಡು ಅದರಲ್ಲಿ 1 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ ಅದರಲ್ಲಿ ಈರುಳ್ಳಿ ಹಾಕಿ ಫ್ರೈ ಮಾಡಿ.
* ಈಗ ಬೇಯಿಸಿದ ಆಲೂಗಡ್ಡೆ ಮತ್ತು ಜೋಳ ಹಾಕಿ ಮ್ಯಾಶ್ ಮಾಡಿ.
* ನಂತರ ಖಾರದ ಪುಡಿ, ಉಪ್ಪು, ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿ ನಂತರ ಒಲೆಯಿಂದ ಇಳಿಸಿ.
* ಈಗ ಮೈದಾ ಹಿಟ್ಟಿಗೆ ಬಿಸಿ ನೀರು ಮತ್ತು ಎಣ್ಣೆ, ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕಲೆಸಿ.
* ಈಗ ಆಲೂ, ಜೋಳದ ಮಿಶ್ರಣದಿಂದ ಮೀಡಿಯಂ ಗಾತ್ರದ ಉಂಡೆ ಮಾಡಿಕೊಳ್ಳಿ.
* ನಂತರ ಮೈದಾ ಹಿಟ್ಟನ್ನು ಉಂಡೆ ಕಟ್ಟಿ, ಅದನ್ನು ಚಪಾತಿಗೆ ತಟ್ಟಿದ ರೀತಿಯಲ್ಲಿ ತಟ್ಟಿ, ಜೋಳದ ಉಂಡೆಯನ್ನು ಇಟ್ಟು, ನಂತರ ಅದನ್ನು ಮಡಚಿ ಮತ್ತೊಮ್ಮೆ ಲಟ್ಟಿಸಿ.
* ಈಗ ತವಾವನ್ನು ಬಿಸಿ ಮಾಡಿ ಅದಕ್ಕೆ ಎಣ್ಣೆ ಸವರಿ, ಅದರಲ್ಲಿ ಪರೋಟವನ್ನು ಹಾಕಿ ಬೇಯಿಸಿ.

ಈಗ ಯಮ್ಮೀ ಬ್ರೇಕ್‌ಫಾಸ್ಟ್‌ ಸ್ವೀಟ್‌ ಕಾರ್ನ್‌ ಪರೋಟ ಸವಿಯಲು ಸಿದ್ಧ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!