October 15, 2026
Thursday, October 15, 2026
spot_img

ಕ್ಯಾಮರಾ ಚಾರ್ಜಸ್‌ ಡ್ರಾಪ್‌! ಇನ್ಮುಂದೆ ಹಂಪಿಯಲ್ಲಿ ಎಷ್ಟು ಬೇಕಾದ್ರೂ ಫೋಟೊಸ್‌ ತಗೋಬೋದು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿಶ್ವಪ್ರಸಿದ್ಧ ಐತಿಹಾಸಿಕ ತಾಣವಾದ ಹಂಪಿಯಲ್ಲಿ ಇಡೀಗ ಫೋಟೊಗ್ರಫಿ ನಿಯಮಗಳನ್ನು ಸಡಿಲಿಸಲಾಗಿದೆ. ಕ್ಯಾಮರಾ ಶುಲ್ಕ ಕೂಡ ಸಂಪೂರ್ಣ ರದ್ದಾಗಿದ್ದು, ಮನಬಂದಷ್ಟು ಫೋಟೊಗಳನ್ನು ತೆಗೆದುಕೊಳ್ಳಬಹುದಾಗಿದೆ.

ಕೇಂದ್ರ ಸಂಸ್ಕೃತಿ ಸಚಿವಾಲಯ ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಈ ನಿಯಮಗಳನ್ನು ಸಡಿಲಗೊಳಿಸಿದೆ. ಜನರು ಇಲ್ಲಿ ಫೋಟೊಗಳನ್ನು ತೆಗೆದುಕೊಳ್ಳಲಿ, ಹೆಚ್ಚೆಚ್ಚು ಪ್ರವಾಸಿಗರು ಹಂಪಿಗೆ ಆಗಮಿಸಲಿ ಎಂದು ಈ ರೀತಿ ಮಾಡಲಾಗಿದೆ.

ಈ ಹಿಂದೆ ಕ್ಯಾಮರಾಗೆ ಐವತ್ತು ರೂಪಾಯಿ ಶುಲ್ಕವಿತ್ತು. ಆದರೆ ಇದೀಗ ಎಲ್ಲ ಶುಲ್ಕ ರದ್ದಾಗಿದೆ. ಆದರೆ ಡ್ರೋನ್‌ ಹಾಗೂ ಟ್ರೈಪಾಡ್‌ ಬಳಕೆಗೆ ಪರ್ಮಿಷನ್‌ ತೆಗೆದುಕೊಳ್ಳಬೇಕಿದೆ. ಹಂಪಿಯಲ್ಲಿ ಫೋಟೊ ಶೂಟ್‌, ಕಪಲ್‌ ಫೋಟೊಶೂಟ್‌, ಮೆಟರ್ನಿಟಿ ಶೂಟ್‌ ಇನ್ನಿತರ ಶೂಟ್‌ಗಳನ್ನು ಜನ ಮಾಡುತ್ತಲೇ ಇರುತ್ತಾರೆ. ಈಗ ಕ್ಯಾಮರಾ ಚಾರ್ಜಸ್‌ ಡ್ರಾಪ್‌ ಮಾಡಿರುವ ಕಾರಣ ಇನ್ನು ಹಂಪಿಗೆ ಹೆಚ್ಚು ಜನ ಭೇಟಿ ನೀಡುವ ಸಾಧ್ಯತೆ ಇದೆ.

ಚಲನಚಿತ್ರ ಶೂಟಿಂಗ್‌ಗೆ ಒಂದು ದಿನಕ್ಕೆ ಒಂದು ಲಕ್ಷ ರೂಪಾಯಿ ಡೆಪಾಸಿಟ್‌ ಮಾಡಬೇಕು. ಶೂಟಿಂಗ್‌ ಸಮಯದಲ್ಲಿ ಎಎಸ್‌ಐ ತಂಡ ಜೊತೆಗೇ ಇರುತ್ತದೆ. ಇನ್ನು ಡ್ರೋನ್‌ ಹಾರಾಟಕ್ಕೂ ಐವತ್ತು ಸಾವಿರ ರೂಪಾಯಿ ಠೇವಣಿ ಇಡಬೇಕಾಗುತ್ತದೆ.

Must Read