ಹೊಸದಿಗಂತ ವರದಿ, ಮಂಡ್ಯ :
ಕಳ್ಳ-ಮಳ್ಳರನ್ನು ಹಿಡಿಯಲು ಮೈಸೂರಿಗೆ ಹೋಗುತ್ತಿದ್ದೇವೆ. ಮುಂದೆ ಕಾಂಗ್ರೆಸ್‌ನವರು ಹೋಗುತ್ತಿದ್ದಾರೆ. ನಾವು ಅವರನ್ನು ಹಿಡಿಯಲು ಹಿಂದೆ ಹೋಗುತ್ತಿದ್ದೇವೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ವ್ಯಂಗ್ಯವಾಡಿದರು.
ಪಟ್ಟಣದ ಪ್ರಮುಖ ವೃತ್ತದಲ್ಲಿ ಬಿಜೆಪಿ-ಜೆಡಿಎಸ್ ವತಿಯಿಂದ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದೆಲ್ಲೆಡೆ ಸಿದ್ದರಾಮಯ್ಯ ಅವರ ಲೂಟಿ ಗ್ಯಾಂಗ್ ನಿಂತಿದೆ. ಪಿಎಸ್‌ಐ ವರ್ಗಾವಣೆಗೆ 40ಲಕ್ಷ ರೇಟ್ ಫಿಕ್ಸ್ ಮಾಡಿದ್ದಾರೆ. ವಿರೋಧ ಪಕ್ಷವಾಗಿ ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ನಾನು ಕಳ್ಳ ಎಂದು ವಿಧಾನ ಸೌಧದಲ್ಲೇ ಸಿದ್ದರಾಮಯ್ಯನವರು ದಾಖಲೆ ಕೊಡಬೇಕಿತ್ತು. ಅದು ಬಿಟ್ಟು ಮೈಸೂರಿನಲ್ಲಿ ಏಕೆ ಕೊಡುತ್ತಿದ್ದಾರೆ, ವಿಧಾನ ಸೌಧದಲ್ಲಿ ನಾನು ಕಳ್ಳ ಅಲ್ಲ ಎಂದು ಹೇಳಿಕೊಳ್ಳಲು ಸಾಧ್ಯವಾಗಲಿಲ್ಲ. 136 ಶಾಸಕರು ಇದ್ದರೂ ಆಗಲಿಲ್ಲ ಎಂದು ಟೀಕಿಸಿದರು.