ಬಂದೇ ಬಿಡ್ತು ಹಾರೋ ಬೈಕ್:‌ ಇದರ ಬೆಲೆಯೆಷ್ಟು ಗೊತ್ತಾ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ರಸ್ತೆಯ ಮೇಲೆ ಚಲಿಸೋ ಬೈಕುಗಳನ್ನು ನೀವು ನೋಡಿರುತ್ತೀರಿ. ಅದು ಬಿಡಿ ಕೆಸರಿನಲ್ಲಿ, ಹಿಮದಲ್ಲಿ ಅಷ್ಟೇ ಏಕೆ ನೀರಿನ ಮೇಲೆ ಚಲಿಸೋ ಬೈಕುಗಳನ್ನೂ ನೀವು ನೋಡಿರಲಿಕ್ಕೆ ಸಾಕು. ಆದ್ರೆ ಇಲ್ಲಿ ನೋಡಿ ಜಪಾನಿನ ಕಂಪನಿಯೊದು ಗಾಳಿಯಲ್ಲಿ ಹಾರೋ ಬೈಕನ್ನು ತಯಾರಿಸಿದೆ. ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಆಟೋ ಎಕ್ಸ್‌ ಪೋ ವೊಂದರಲ್ಲಿ ಇದನ್ನು ಪರಿಚಯಿಸಲಾಗಿದೆ.

ವಿಶ್ವದ ಮೊದಲ ಹಾರುವ ಬೈಕು ಎಂಬುದಕ್ಕೆ ಪಾತ್ರವಾದ ಈ ಹೋವರ್‌ ಬೈಕ್‌ ಜನಪ್ರಿಯ ʼಸ್ಟಾರ್‌ ವಾರ್ಸ್‌ʼ ನಲ್ಲಿರೋ ಹಾರುವ ಬೈಕನ್ನು ಹೋಲುತ್ತದೆ. ಜಪಾನಿನ ಸ್ಟಾರ್ಟ್ಅಪ್ AERWINS ಟೆಕ್ನಾಲಜೀಸ್ ಈ ಫ್ಲೈಯಿಂಗ್ ಬೈಕ್ಅನ್ನು ತಯಾರಿಸಿದೆ.

ತಯಾರಕರು ಮುಂದಿನ ವರ್ಷ ಮಾದರಿಯನ್ನು ಬಿಡುಗಡೆ ಮಾಡಲು ಯೋಜಿಸಿದ್ದಾರೆ. ಹಾರುವ ಬೈಕ್‌ಗೆ XTURISMO ಹೋವರ್‌ಬೈಕ್ ಎಂದು ಹೆಸರಿಸಲಾಗಿದೆ. XTURISMO ಹೋವರ್‌ಬೈಕ್ 100 ಕಿಮೀ (ಗಂಟೆಗೆ 62 ಮೈಲುಗಳು) ವೇಗದ ಮಿತಿಯೊಂದಿಗೆ 40 ನಿಮಿಷಗಳವರೆಗೆ ಹಾರಬಲ್ಲದು.

ಜಪಾನ್‌ನಲ್ಲಿ, ಹಾರುವ ಬೈಕ್ ಈಗಾಗಲೇ ಮಾರಾಟದಲ್ಲಿದೆ. AERWINS ನ ಸಂಸ್ಥಾಪಕ ಮತ್ತು CEO, Shuhei Komatsu ಪ್ರಕಾರ, ಕಂಪನಿಯು 2023 ರಲ್ಲಿ US ನಲ್ಲಿ ಸಣ್ಣ ಆವೃತ್ತಿಯನ್ನು ಮಾರಾಟ ಮಾಡಲು ಯೋಜಿಸುತ್ತಿದೆ. ಈ ಹೋವರ್‌ಬೈಕ್ ನ ಬೆಲೆ $777,000 (6 ಕೋಟಿ ರೂಪಾಯಿಗೂ ಹೆಚ್ಚು ) ಆದಾಗ್ಯೂ, AERWINS ಕಂಪನಿಯು $50,000 ಗೆ ವೆಚ್ಚವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ. ಆದರೆ ಇದು 2-3 ವರ್ಷಗಳನ್ನು ತೆಗೆದುಕೊಳ್ಳುತ್ತದೆ ಮತ್ತು 2025 ರ ವೇಳೆಗೆ ಸಿದ್ಧವಾಗಲಿದೆ ಎನ್ನಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!