BABY CARE | ಹುಟ್ಟಿದ ಮಕ್ಕಳಿಗೆ ಕಾಡಿಗೆ ಹಚ್ಚುವುದರಿಂದ‌ ಕಣ್ಣುಗಳು‌ ಸುಂದರವಾಗಿ ರೂಪುಗೊಳ್ಳುತ್ತವಾ?

ಮನೆಗೆ ಪುಟಾಣಿ ಅತಿಥಿ ಬರೋದು ಎಂದರೆ ಎಂಥಾ ಸಂಭ್ರಮ. ಮಗುವನ್ನು ಯಾರಿಗೂ ತೋರಿಸದೇ ಕೋಣೆಯಲ್ಲೇ ಇಟ್ಟುಕೊಳ್ಳೋದು, ತೋರಿಸಿದರೂ ತೋರಿಸದಂತೆ ಒಂದು ಝಲಕ್ ಅಷ್ಟೇ ತೋರಿಸಿ ಮಗುಗೆ ಹಸಿವಾಗಿದೆ ಎಂದು ರೂಮಿಗೆ ಕಳಿಸೋದು ಮಾಡೇ ಮಾಡುತ್ತಾರೆ.

Is it safe to apply Kajal on Newborn baby eyes - Theayurvedaಮಕ್ಕಳಿಗೆ ದೃಷ್ಟಿ ಆಗಬಾರದು ಎಂದು ಮಗುವಿನ ಕಣ್ಣಿಗೆ ಕಾಜಲ್, ಹುಬ್ಬಿಗೆ ಕಣ್ಣುಕಪ್ಪು, ಹಣೆಗೆ ದೊಡ್ಡ ಬೊಟ್ಟಿಟ್ಟು ಮಗು ಸುಂದರವಾಗಿ ಕಾಣದಂತೆ ಮಾಡುತ್ತಾರೆ. ಕಾಜಲ್ ಹಚ್ಚುವುದರಿಂದ ಮಗುವಿನ ಕಣ್ಣು ಜಿಂಕೆ ರೀತಿ ಸುಂದರವಾಗಿ ಇರುತ್ತದೆ ಎನ್ನುವ ನಂಬಿಕೆ ಇದೆ. ಇನ್ನು ಹುಬ್ಬಿಗೆ ಬಳಿದರೆ ಗಾಢವಾದ ಹುಬ್ಬುಗಳು ಮಗುವಿನದ್ದಾಗುತ್ತದೆ ಎನ್ನುವುದು ದೊಡ್ಡವರ ನಂಬಿಕೆ.

Eye Makeup Used To Protect Children Can Poison Them Instead : Shots -  Health News : NPRಕಣ್ಕಪ್ಪು ಮಕ್ಕಳಿಗೆ ಒಳ್ಳೆಯದಾ?

ಎಲ್ಲಾ ರೀತಿಯ ಕಾಡಿಗೆಯಲ್ಲಿಯೂ ಲೆಡ್ ಅಂಶವಿದೆ. ಲೆಡ್ ಅಂಶ ವಿಷಕಾರಿ. ಇದು ಕಿಡ್ನಿ, ಮೆದುಳು, ಬೋನ್ ಮ್ಯಾರೋ ಹಾಗೂ ಇತರೆ ಅಂಗಗಳನ್ನು ಡ್ಯಾಮೇಜ್ ಮಾಡುವ ಶಕ್ತಿ ಹೊಂದಿದೆ. ಕಡೆಗೆ ರಕ್ತದಲ್ಲಿ ಹೆಚ್ಚು ಲೆಡ್ ಇದ್ದರೆ ಕೋಮ ಅಥವಾ ಸಾವು ಕೂಡ ಸಂಭವಿಸಬಹುದು. ಮಕ್ಕಳಿಗೆ ಕಾಡಿಗೆ, ಪೌಡರ್ ಹಚ್ಚುವುದನ್ನು ನಿಲ್ಲಿಸಿ. ಮಕ್ಕಳು ಹೇಗಿದ್ದಾರೋ ಹಾಗೇ ಸುಂದರವಾಗಿ ಇರಲು ಬಿಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!