ಗುಜರಾತ್‌ ಚುಣಾವಣೆಯಲ್ಲಿ ಕಾಂಗ್ರೆಸ್‌ ನಿರೀಕ್ಷೆಗಿಂತ ಕಡಿಮೆ ಸ್ಥಾನ ಬಂದಿದೆ: ಪ್ರಿಯಾಂಕ್ ಖರ್ಗೆ

ಹೊಸದಿಗಂತ ವರದಿ, ಕಲಬುರಗಿ
ಗುಜರಾತ್ ವಿಧಾನ ಸಭಾ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿರೀಕ್ಷೆಗಿಂತ ಕಡಿಮೆ ಸ್ಥಾನಗಳು ಬಂದಿವೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.
ಗುರುವಾರ ನಗರದ ಲುಂಬಿನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಗುಜರಾತ್,ನಲ್ಲಿ ಬಿಜೆಪಿ ಮುನ್ನೆಡೆ ನೋಡಿದರೇ ನಮ್ಮ ನಿರೀಕ್ಷೆ ಇದ್ದಷ್ಟು ಸ್ಥಾನಗಳು ನಮಗೆ ಲಭಿಸಿಲ್ಲ ಎಂದರು.
ಗುಜರಾತ್ ರಾಜ್ಯದಲ್ಲಿ ಮೂರು ಎಂ (M) ಗಳು ಕೆಲಸ ಮಾಡಿವೆ. ಮನಿ, ಮಸಲ್ ಮತ್ತು ಮೋದಿ ಎಂದ ಅವರು, ಬಿಜೆಪಿ ಹಣ ಖರ್ಚು ಮಾಡಿ ಚುನಾವಣೆ ನಡೆಸುತ್ತಿದೆ ಎಂದರು.
ಮೋದಿ ಪ್ರಭಾವ ಗುಜರಾತ್ ನಲ್ಲಿ ಇರೋದು ಮತ್ತೊಂದು ಸಲ ಸಾಬೀತಾಗಿದೆ.ಇದನ್ನು ನಾವು ತಳ್ಳಿ ಹಾಕಲು ಸಾಧ್ಯವಿಲ್ಲ. ನಮ್ಮ ಪಕ್ಷದ ಸಂಘಟನೆ ಕೊರತೆ ಕಂಡು ಬಂದಿದ್ದು,ಅದನ್ನು ನಾವು ಸರಿಪಡಿಸುವ ಚಿಂತನೆ ಮಾಡುತ್ತೇವೆ ಎಂದರು.
ಉತ್ತರ ಪ್ರದೇಶ, ಗುಜರಾತ್ ಬಿಟ್ಟರೆ ಬಿಜೆಪಿ ಎಲ್ಲಿಯೂ ಸಹ ತನ್ನ ಸ್ವಂತ ಬಲದ ಮೇಲೆ ಆಡಳಿತಕ್ಕೆ ಬಂದಿಲ್ಲ. ಶಾಸಕರನ್ನು ಖರೀದಿ ಮಾಡುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ ಎಂದರು. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಜಾಸ್ತಿ ಇದೆ. ಆಥಿ೯ಕ ಸಮಸ್ಯೆ ಕೂಡ ಹದಗೆಟ್ಟಿದ್ದು,ಇದರ ಕಡೆಗೆ ಬಿಜೆಪಿ ಗಮನ ಹರಿಸುತ್ತಿಲ್ಲ ಎಂದರು.
ನರೇಂದ್ರ ಮೋದಿ ಅವರಿಗೆ ರಾವಣ್ ಎಂದು ಹೇಳಿದ ಕಾರಣಕ್ಕೆ ಗುಜರಾತ್ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದು ಕೇಳಲಾದ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಖಗೆ೯, ಟೀಕೆಯೇ ಮಾಡಬಾರದು ಎಂದರೆ ಹೇಗೆ?. ಬಿಜೆಪಿದವರು ಸಹ ಹಿಂದೆ ಸೋನಿಯಾ ಗಾಂಧಿ ಅವರಿಗೆ ಇಟಾಲಿಯನ್ ರಾಣಿ, ಮನಮೋಹನ್ ಸಿಂಗ್ ಅವರಿಗೆ ಮೌನ್ ಮೋಹನ್ ಸಿಂಗ್ ಹಾಗೂ ರೇಣುಕಾ ಚೌದರಿ ಅವರಿಗೆ ಶೂರ್ಪನಖಿ ಎಂದು ಕರೆದಿದ್ದರು. ಇದೂ ಸಹ ತಪ್ಪಲ್ಲವೇ ಎಂದು ಪ್ರಶ್ನಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!