September 20, 2026
Sunday, September 20, 2026
spot_img

WPL 2026 Final | ವಿನ್ನಿಂಗ್‌ ಟ್ರೋಫಿ ಅಭಿಮಾನಿಗಳಿಗಲ್ಲದೆ ಇನ್ಯಾರಿಗೆ ಡೆಡಿಕೇಟ್‌ ಮಾಡೋಕೆ ಸಾಧ್ಯ ಹೇಳಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಿನ್ನೆ ವಡೋದರದ ಸ್ಟೇಡಿಯಂನಲ್ಲಿ ಹಿಸ್ಟರಿ ಸೃಷ್ಟಿಯಾಗಿದೆ. ಮಹಿಳಾ ಪ್ರೀಮಿಯರ್ ಲೀಗ್​ನ ನಾಲ್ಕನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಸ್ಮೃತಿ ಮಂಧಾನ ಪಡೆ ಗೆದ್ದು ಟ್ರೋಫಿ ಎತ್ತಿ ಹಿಡಿದಿದೆ.

ಈಗಾಗಲೇ ಗೆಲುವಿನ ರುಚಿ ಕಂಡಿದ್ದ ಆರ್‌ಸಿಬಿ ಮತ್ತೆ ಗೆಲುವನ್ನು ಬಯಸಿತ್ತು. ಆರ್‌ಸಿಬಿಯಷ್ಟು ಸಪೋರ್ಟೀವ್‌ ಹಾಗೂ ಲಾಯಲ್‌ ಫ್ಯಾನ್‌ಬೇಸ್‌ ಇನ್ಯಾವ ತಂಡಕ್ಕೂ ಇಲ್ಲ. ಅವರಿಗಾಗಿ ಮತ್ತೆ ಆರ್‌ಸಿಬಿ ಟ್ರೋಫಿ ಮುಡಿಗೇರಿಸಿಕೊಂಡಿದೆ.

ಈ ಬಗ್ಗೆ ನಾಯಕಿ ಸ್ಮೃತಿ ಮಂಧಾನ ಮಾತನಾಡಿದ್ದು, ಈ ಗೆಲುವು ನಮ್ಮ ಅಭಿಮಾನಿಗಳದ್ದು, ನಮ್ಮ ತಂಡದ ಈ ಬಿಗ್‌ ಟ್ರೋಫಿ ಅಭಿಮಾನಿಗಳಿಗೆ ಅರ್ಪಣೆ ಎಂದಿದ್ದಾರೆ. ಐಪಿಎಲ್‌ನ ಆರ್‌ಸಿಬಿ ಟೀಂನಲ್ಲಿ ಇರೋದು ತುಂಬಾ ಹೆಮ್ಮೆಯ ವಿಷಯ.

ಇಡೀ ವಿಶ್ವದಲ್ಲೇ ಇಂಥ ಅಭಿಮಾನಿಗಳು ಎಲ್ಲಿಯೂ ಸಿಗೋದಿಲ್ಲ. ಎಷ್ಟೊಂದು ಮಂದಿ ನಮ್ಮ ಮ್ಯಾಚ್‌ಗಳಿಗೆ ಬಂದು ನಮ್ಮನ್ನು ಹುರಿದುಂಬಿಸಿದ್ದಾರೆ.ಫೈನಲ್‌ ಪಂದ್ಯದಲ್ಲಿ ಅವರನ್ನು ನೋಡಿದ್ರೆ ಗೆಲ್ಬೇಕು ಗೆಲ್ಬೇಕು ಅನಿಸ್ತಾ ಇತ್ತು.

ಈ ಟ್ರೋಫಿ ನಿಮ್ಮದು ಅಭಿಮಾನಿಗಳೇ, ಈ ಸಲ ಕಪ್‌ ನಮ್ದು ಎಂದು ಈಗಾಗಲೇ ಒಮ್ಮೆ ಹೇಳಿದ್ದೀನಿ. ಮತ್ತೆ ಹೇಳ್ತೀನಿ ಕೇಳಿ ಈ ಸಲ ಕಪ್‌ ನಮ್ದು2 ಎಂದಿದ್ದಾರೆ.

ಈ ಮಾತನ್ನು ಕೇಳುತ್ತಿದ್ದಂತೆಯೇ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !