ಉಕ್ರೇನ್‌ ನ ನಿರಾಶ್ರಿತರಿಗೆ ನೆಲೆಯಾಗಿ ನಿಲ್ಲಲಿದೆ ಕೆನಡಾ: ಆಶ್ರಯದ ಭರವಸೆ ನೀಡಿದ ಪ್ರಧಾನಿ ಟ್ರೂಡೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉಕ್ರೇನ್‌ ಮೇಲಿನ ರಷ್ಯಾದ ಆಕ್ರಮಣದಿಂದ ಲಕ್ಷಾಂತರ ಜನ ಉಕ್ರೇನ್‌ ನಿಂದ ಪಲಾಯನಗೊಂಡಿದ್ದು, ಅಂತವರಿಗೆ ಆಶ್ರಯ ನೀಡಲು ಕೆನಡಾ ಸರ್ಕಾರ ಸಿದ್ಧವಾಗಿದೆ.
ಈ ಬಗ್ಗೆ ಮಾತನಾಡಿದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರೂಡೋ, ಯುಧ್ದ ಪೀಡಿತ ಉಕ್ರೇನ್‌ ನ ನಿರಾಶ್ರಿತ ಜನರಿಗೆ ಸಾಧ್ಯವಾದಷ್ಟರ ಮಟ್ಟಿಗೆ ಆಶ್ರಯ ನೀಡಲಿದ್ದೇವೆ. ಲಕ್ಷಾಂತರ ಉಕ್ರೇನಿಯನ್ನರು ತಮ್ಮ ದೇಶವನ್ನು ತೊರೆದು ಪಲಾಯನ ಮಾಡುವುದನ್ನು ನೋಡಿದರೆ, ನಮ್ಮ ಹೃದಯಗಳು ಒಡೆಯುತ್ತವೆ ಎಂದು ಭಾವುಕರಾಗಿ ಮಾತನಾಡಿದರು.
ಪೊಲೆಂಡ್‌ ಅಧ್ಯಕ್ಷ ಆಂಡ್ರೆಜ್ ಡುಡಾ ಮತ್ತು ಪ್ರಧಾನ ಮಂತ್ರಿ ಮಾಟಿಯುಸ್ಜ್ ಮೊರಾವಿಕಿ ಹಾಗೂ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಜತೆಗೆ ಚರ್ಚೆ ನಡೆಸಿದ್ದಾರೆ.
ಇನ್ನು ಉಕ್ರೇನ್‌ ತೊರೆದು ಕೆನಡಾಗೆ ಬರುವ ಜನರಿಗೆ ಅಗತ್ಯ ಸೇವೆಗಳನ್ನು ಒದಗಿಸಲಾಗುವುದು ಹಾಗು ನಿರಾಶ್ರಿತರಿಗೆ ವಿದ್ಯಾಭ್ಯಾಸ ಹಾಗೂ ಉದ್ಯೋಗದ ಅವಕಾಶ ನೀಡಲಿದ್ದೇವೆ ಎಂದು ಘೋಷಿಸಿದರು. ಇನ್ನು ಯುದ್ಧದ ನಂತರ ಉಕ್ರೇನ್‌ ಗೆ ಮರಳಿ ಹೋಗಲು ಇಚ್ಛಿಸುವವರು ಹಿಂದಿರುಗಬಹುದು ಅಥವಾ ಕೆನಡಾದಲ್ಲೇ ತಮ್ಮ ಜೀವನ ಕಟ್ಟಿಕೊಳ್ಳಬಹುದು ಎಂದು ಟ್ರೂಡೋ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!