- ಹೊಸದಿಗಂತ ಡಿಜಿಟಲ್ ಡೆಸ್ಕ್
ರಷ್ಯಾ ಉಕ್ರೇನ್ ಸಂಘರ್ಷ ಮುಂದುವರೆದಿದೆ. ಕದನ ಬಿಕ್ಕಟ್ಟಿನಿಂದ ದಿನಕ್ಕೊಂದು ಬಿಕ್ಕಟ್ಟುಗಳು ಸೃಷ್ಟಿಯಾಗುತ್ತಿದ್ದು ಆ ಎರಡು ರಾಷ್ಟ್ರಗಳಿಗೆ ಮಾತ್ರವಲ್ಲ ಇಡೀ ಜಗತ್ತಿಗೆ ಹೊಡೆತ ಬೀಳುತ್ತಿದೆ.
ಇದೀಗ ರಷ್ಯಾವು ತನ್ನ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಿದ ಪಾಶ್ಚಿಮಾತ್ಯ ರಾಷ್ಟಗಳ ಮೇಲೆ ಪ್ರತಿಕಾರ ಕ್ರಮಕ್ಕೆ ಮುಂದಾಗಿದ್ದು, ತನ್ನ ದೇಶದಿಂದ ರಫ್ತಾಗುತ್ತಿದ್ದ 200 ಕ್ಕೂ ಹೆಚ್ಚು ವಸ್ತುಗಳ ಮೇಲೆ ನಿಷೇಧ ಹೇರಿದೆ. ಈ ವರ್ಷಾಂತ್ಯದವರೆಗೆ ಕೃಷಿ, ವಿದ್ಯುತ್, ವೈದ್ಯಕೀಯ ಮತ್ತು ತಾಂತ್ರಿಕ ಉಪಕರಣಗಳ ರಫ್ತುಗಳನ್ನು ನಿಲ್ಲಿಸುವುದಾಗಿ ರಷ್ಯಾ ಹೇಳಿದೆ.
ರಷ್ಯಾ ಆಹಾರ ವಸ್ತುಗಳ ರಫ್ತು ನಿಲ್ಲಿಸಿದರೆ ಅದರ ಪರಿಣಾಮಗಳು ಜಗತ್ತಿನ ಮೇಲೆ ಘೋರವಾಗಿರಲಿದೆ.
ಅದರಲ್ಲೂ ಪ್ರಮುಖವಾಗಿ ಮಧ್ಯಪ್ರಾಚ್ಯ ಮತ್ತು ಆಫ್ರಿಕಾದ ಬಡ ರಾಷ್ಟ್ರಗಳು ತಮ್ಮ ಆಂತರಿಕ ಆಹಾರ ವಸ್ತುಗಳ ಬೇಡಿಕೆಯನ್ನು ಪೂರೈಸಿಕೊಳ್ಳಲು ರಷ್ಯಾ ರಫ್ತನ್ನೇ ಪ್ರಮುಖವಾಗಿ ಅವಲಂಭಿಸಿವೆ.
ಈಜಿಪ್ಟ್ ವಿಶ್ವದಲ್ಲೇ ಅತಿದೊಡ್ಡ ಗೋಧಿ ಆಮದುದಾರ ರಾಷ್ಟ್ರವಾಗಿದ್ದು, ಆ ದೇಶದ ಬಹುಪಾಲು ಬೇಡಿಕೆಯನ್ನು ರಷ್ಯಾ ಮತ್ತು ಉಕ್ರೇನ್‌ನಲ್ಲಿ ದೇಶಗಳು ಪೂರೈಸುತ್ತವೆ. ರಷ್ಯಾ ಕೃಷಿ ಉತ್ಪನ್ನಗಳ ರಫ್ತು ನಿಲ್ಲಿಸಿದರೆ ಆಹಾರ ವಸ್ತುಗಳಿಗೆ ಪೂರೈಕೆ ವ್ಯತ್ಯಯ, ಬೆಲೆಯೇರಿಕೆಗಳಿಂದ ಆ ದೇಶಗಳು ತತ್ತರಿಸಲಿವೆ. ಇದು ಸಾಮಾಜಿಕ ಅಶಾಂತಿಗೆ ಸಹ ಉತ್ತೇಜನ ನೀಡಬಹುದು ಎಂದು ವಿಶ್ವಬ್ಯಾಂಕ್ ಎಚ್ಚರಿಕೆ ನೀಡಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ