ಬಿಪಿಎಲ್ ಕಾರ್ಡ್ ರದ್ದು | ಬಡವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ: ಜಗದೀಶ ಶೆಟ್ಟರ್

ಹೊಸದಿಗಂತ ವರದಿ,ಹುಬ್ಬಳ್ಳಿ:

ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಅನ್ನಭಾಗ್ಯಯೋಜನೆ ನೀಡಲು ಸರ್ಕಾರ ಆಗುತ್ತಿಲ್ಲ. ಈ ಹಿನ್ನೆಲೆ ಬಿಪಿಎಲ್ ಕಾರ್ಡ್ ರದ್ದುಗೊಳಿಸಿ, ಬಡವರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ ಎಂದು ಸಂಸದ ಜಗದೀಶ ಶೆಟ್ಟರ್ ಹರಿಹಾಯ್ದರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹುಶಃ ಸರ್ಕಾರಕ್ಕೆ ಬೋಗಸ್ ಬಿಪಿಎಲ್ ಕಾರ್ಡ್‌ಗಳಿವೆ ಎಂಬುವುದು ಇವತ್ತು ಜ್ಞಾನೋದಯವಾಗಿದೆ ಅನಿಸುತ್ತಿದೆ. ಕೋಟ್ಯಾಂತರ ಕಾರ್ಡ್‌ಗಳನ್ನು ರದ್ದು ಮಾಡಿ ಬಡವರಿಗೆ ತೊಂದರೆ ನೀಡಲಾಗುತ್ತಿದೆ ಎಂದರು.

ಬಿಜೆಪಿ ಬಗ್ಗೆ ಅಪಪ್ರಚಾರ: ಸರ್ಕಾರದಿಂದ ಯಾವುದಾದರೂ ತನಿಖೆಯ ಆಯೋಗ ರಚಿಸಿದರೆ ಅದರ ಸಂಪೂರ್ಣ ವರದಿ ಮುಖ್ಯಮಂತ್ರಿಗೆ ನೀಡಬೇಕು. ಬಳಿಕ ಸಚಿವ ಸಂಪುಟದಲ್ಲಿ ತೀರ್ಮಾಣ ಮಾಡಿ ಸದನದಲ್ಲಿ ಮಂಡಿಸುವುದು ಒಂದು ಪ್ರಕ್ರಿಯೆ. ಆದರೆ ಸರ್ಕಾರ ರಾಜ್ಯದಲ್ಲಿ ಉಪಚುನಾವಣೆ ಇರುವುದರಿಂದ ಬಿಜೆಪಿ ಬಗ್ಗೆ ಅಪಪ್ರಚಾರ ಮಾಡಲು ತರಾತುರಿಯಲ್ಲಿ ಮಧ್ಯಂತರ ವರದಿ ಪಡೆಯಿತು. ಇದು ಹಸ್ತಾಂತರ ಆದ ಬಳಿಕ ಕೆಲವು ಮಾಹಿತಿ ಸಿಎಂ ಅಥವಾ ನ್ಯಾಯಮೂರ್ತಿ ಡಿ ಕುನ್ಹಾ ಆಯೋಗ ಕಚೇರಿಯಿಂದ ಸೋರಿಕೆಯಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರೀತಿ ಮಾಡುವ ಮೂಲಕ ಕಾನೂನು ವ್ಯವಸ್ಥೆ ಯನ್ನು ದುರಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಸರ್ಕಾರಕ್ಕೆ ಭಯ ಏಕೆ?: ಶಾಸಕರ ಖರೀದಿ ಬಗ್ಗೆ ಸರ್ಕಾರ ಹತ್ತಿರ ಆಧಾರಗಳಿದ್ದರೆ ಬಿಡುಗಡೆ ಮಾಡಲಿ. ಸರ್ಕಾರ ಅವರದಿದ್ದರೂ ಏಕೆ ಭಯಪಡಬೇಕು? ಶಾಸಕ ರವಿ ಗಾಣಿಗ ಅವರಿಂದ ಉದ್ದೇಶ ಪೂರ್ವಕವಾಗಿ ಹೇಳಿಕೆ ಕೊಡಿಸಿದ್ದಾರೆ. ಮುಡಾ, ವಾಲ್ಮಿಕಿ ಹಗರಣದಿಂದ ಸರ್ಕಾರ ಕೆಟ್ಟ ಹೆಸರು ಬಂದಿದೆ. ದಿನದಿಂದ ದಿನಕ್ಕೆ ಜನಪ್ರಿಯತೆ ಕಡಿಮೆ ಆಗುತ್ತಿದೆ. ಇನ್ನೂ ಜನಸಾಮಾನ್ಯರು ಹಗರಣದ ಬಗ್ಗೆ ಮಾತನಾಡುತ್ತಿದ್ದು, ಇದನ್ನು ವಿಷಯಾಂತರ ಮಾಡಲು ಈ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕರ ಮೂಲಕ ಮಾಡಿಸುತ್ತಿದ್ದಾರೆ.
ಇದು ಅವರ ಸ್ಥಾನಕ್ಕೆ ಯೋಗ್ಯವಾದ ಕೆಲಸ ವಲ್ಲ. ಕಾಂಗ್ರೆಸ್‌ಗೆ ಬಿಜೆಪಿ ಬಗ್ಗೆ ಅಪಪ್ರಚಾರ ಮಡುವುದು ತಂತ್ರವಾಗಿದೆ ಎಂದು ಕಿಡಿಕಾರಿದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!