ಹೊಸದಿಗಂತ ಡಿಜಿಟಲ್ ಡೆಸ್ಕ್:
2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತ ಫೈನಲ್ ತಲುಪಿದೆ. ಸದ್ಯ ಫೈನಲ್ ತಲುಪಿರುವ ಟೀಂ ಇಂಡಿಯಾಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದ್ದರೆ, ಟೀಂ ಇಂಡಿಯಾವನ್ನು ಸದಾ ದೂಷಿಸುವ ಪಾಕಿಸ್ತಾನಿ ನಟಿ ಸೆಹರ್ ಶಿನ್ವಾರಿ, ಮತ್ತೊಮ್ಮೆ ಭಾರತದ ಬಗೆಗೆ ತಮಗಿರುವ ಹೊಟ್ಟೆಉರಿಯನ್ನು ಹೊರಹಾಕಿದ್ದಾರೆ.
2023ರ ವಿಶ್ವಕಪ್‌ನ ಫೈನಲ್‌ಗೆ ಭಾರತ ಹೋಗ್ತಿರೋದನ್ನು ನನಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸೆಹರ್ ಶಿನ್ವಾರಿ ಟ್ವೀಟ್ ಮಾಡಿದ್ದಾರೆ. “ಭಾರತ ತಂಡ ಮತ್ತೊಮ್ಮೆ ವಿಶ್ವಕಪ್‌ನಲ್ಲಿ ಫೈನಲ್‌ಗೆ ತಲುಪಿರುವುದನ್ನು ನನ್ನಿಂದ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ಭಾರತ ಎಲ್ಲದರಲ್ಲೂ ಪಾಕಿಸ್ತಾನಕ್ಕಿಂತ ಏಕೆ ಮುಂದಿದೆ?ʼ ಎಂದು ಟ್ವೀಟ್ ಮಾಡುವ ಮೂಲಕ ಶಿನ್ವಾರಿ ಮತ್ತೆ ತಮ್ಮ ನರಿಬುದ್ದಿಯನ್ನು ತೋರಿದ್ದಾರೆ. ಅಷ್ಟೆ ಅಲ್ಲದೆ ‘ಬಿಸಿಸಿಐ ಮತ್ತು ಬಿಜೆಪಿ ಶೀಘ್ರದಲ್ಲೇ ಸರ್ವನಾಶ ಆಗುತ್ತದೆ’ ಎಂಬ ಉದ್ಧಟತನದ ಪೋಸ್ಟ್ ಕೂಡ ಹರಿದಾಡುತ್ತಿದೆ.
ಪಾಕಿಸ್ತಾನಿ ನಟಿಯ ಸರಣಿ ಟ್ವೀಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಭಾರತದ ಕ್ರಿಕೆಟ್ ಅಭಿಮಾನಿಗಳು ಉರಿಯುವ ಬೆಂಕಿಗೆ ತುಪ್ಪ ಸುರಿಯವ ಹಾಗೆ ನಟಿಯ ಕಾಲೆಳೆಯುತ್ತಿದ್ದಾರೆ. ಭಾರತ ತಂಡದ ಮೇಲೆ ಈ ರೀತಿಯ ದಾಳಿ ನಡೆದಿರುವುದು ಇದೇ ಮೊದಲಲ್ಲ. ನಮ್ಮ ವಿರುದ್ಧ ನೀವು ಏನೇ ಪಿತೂರಿ ಮಾಡಿದರೂ ಗೆಲುವು ಸಾಧಿಸಲು ಆಗಲ್ಲ. ನಿಮ್ಮ ನರಿ ಬುದ್ದಿ ನಿಮ್ಮನ್ನೇ ಕೊಲ್ಲುತ್ತದೆ ಎಂಬ ಕಮೆಂಟ್‌ಗಳು ಹರಿದಾಡುತ್ತಿವೆ.
I just can’t digest the fact Indian team has reached world cup final again. Why this bloody country is ahead of us in everything 😭
— Sehar Shinwari (@SeharShinwari) November 15, 2023