ಕುತುಬ್‌ ಮಿನಾರ್‌ ಹಿಂದೂ ದೇವಾಲಯವಾಗಿ ಪರಿವರ್ತಿಸಲು ಸಾಧ್ಯವಿಲ್ಲ: ಪುರಾತತ್ವ ಇಲಾಖೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕುತುಬ್ ಮಿನಾರ್ ಅನ್ನು ದೇವಾಲಯವನ್ನಾಗಿ ಪುನರುಜ್ಜೀವನಗೊಳಿಸಲು ಸಾಧ್ಯವಿಲ್ಲ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ)ಹೇಳಿದೆ. ಕುತುಬ್ ಮಿನಾರ್ ಅನ್ನು ದೇವಸ್ಥಾನವಾಗಿ ಮರುಸ್ಥಾಪಿಸುವಂತೆ ಕೋರಿ ಸಾಕೇತ್ ನ್ಯಾಯಾಲಯದಲ್ಲಿ ಸಲ್ಲಿಸಲಾದ ಅರ್ಜಿಗೆ ಎಎಸ್ಐ ಪ್ರತಿಕ್ರಿಯಿಸಿದೆ. ಕುತುಬ್ ಮಿನಾರ್ ಅನ್ನು ರಾಜಾ ವಿಕ್ರಮಾದಿತ್ಯನಿಂದ ನಿರ್ಮಿಸಲಾಗಿದ್ದು, ಇದು ಹಿಂದೂ ದೇವಾಲಯ ಎಂದು ಎಎಸ್‌ಐನ ಮಾಜಿ ಪ್ರಾದೇಶಿಕ ನಿರ್ದೇಶಕ ಧರಂವೀರ್ ಶರ್ಮಾ ಹೇಳಿಕೆ ನೀಡಿದ್ದರು.

ಶರ್ಮಾ ಹೇಳಿಕೆ ಬಳಿಕ ಕುತುಬ್ ಮಿನಾರ್ ವಿವಾದ ಭುಗಿಲೆದ್ದಿತು. ಕುತುಬ್ ಮಿನಾರ್ ಅನ್ನು ದೇವಸ್ಥಾನವನ್ನಾಗಿ ಪರಿವರ್ತಿಸಿ, ಅಲ್ಲಿಯೇ ದೇಗುಲದ ಕಾರ್ಯನಿರ್ವಹಣೆಗೆ ಅವಕಾಶ ನೀಡುವಂತೆ ಕೋರಿ ಸಾಕೇತ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಬಗ್ಗೆ ನ್ಯಾಯಾಲಯವು ಎಎಸ್‌ಐ ಅಭಿಪ್ರಾಯವನ್ನು ಕೇಳಿದೆ. ಕುತುಬ್ ಮಿನಾರ್ ಐತಿಹಾಸಿಕ ಸ್ಥಳವಾಗಿ 1914 ರಿಂದ ಭಾರತೀಯ ಪುರಾತತ್ವ ಸರ್ವೇಕ್ಷಣೆಯ ರಕ್ಷಣೆಯಲ್ಲಿದೆ. ಈಗ ಅದರ ರಚನೆಯನ್ನು ಬದಲಾಯಿಸಲಾಗುವುದಿಲ್ಲ. ಸಂರಕ್ಷಿತ ಐತಿಹಾಸಿಕ ಸ್ಥಳವನ್ನು ದೇವಾಲಯವನ್ನಾಗಿ ಮಾಡಲು ಸಾಧ್ಯವಿಲ್ಲ. ಇಲ್ಲಿ ದೇವಾಲಯದ ಚಟುವಟಿಕೆಗಳನ್ನು ನಡೆಸುವ ಸಾಧ್ಯತೆ ಇಲ್ಲ ಎಂದು ಎಎಸ್‌ಐ ನ್ಯಾಯಾಲಯಕ್ಕೆ ಉತ್ತರಿಸಿದೆ.

ಈ ಹಿಂದೆ ಕುತುಬ್ ಮಿನಾರ್ ಸಂಕೀರ್ಣದಲ್ಲಿ ಸಂಸ್ಕೃತಿ ಸಚಿವಾಲಯವು ಉತ್ಖನನ ನಡೆಸಲಿರುವುದಾಗಿ ವರದಿಯಾಗಿತ್ತು. ಆದರೆ, ಸಂಕೀರ್ಣದಲ್ಲಿರುವ ಜೈನ ವಿಗ್ರಹಗಳ ಸಮೀಕ್ಷೆಗೆ ಮಾತ್ರವೇ ಇಲಾಖೆ ಯೋಚಿಸುತ್ತಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!