ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಾಗ್ರಿಗಳು:
2 ಕಪ್ ಮೊಸರು
1/2 ಕಪ್ ದೊಡ್ಡ ಮೆಣಸು ( ಅದರ ಬೀಜಗಳನ್ನು ತೆಗೆದಿರಬೇಕು)
1/2 ಚಮಚ ಸಾಸಿವೆ
1/2 ಚಮಚ ಜೀರಿಗೆ
ಉಪ್ಪು ರುಚಿಗೆ ತಕ್ಕಷ್ಟು
2 ಕೆಂಪು ಒಣ ಮೆಣಸಿನ ಕಾಯಿ
1/2 ಚಮಚ ಸಕ್ಕರೆ
ತಯಾರಿಸುವ ವಿಧಾನ:
ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದು ಬಿಸಿಯಾದಾಗ ಸಾಸಿವೆ ಮತ್ತು ಜೀರಿಗೆ ಹಾಕಬೇಕು. ಅದಕ್ಕೆ ಒಣ ಕೆಂಪು ಮೆಣಸನ್ನು ಮುರಿದು ಹಾಕಬೇಕು. ನಂತರ ದೊಡ್ಡ ಮೆಣಸು( ಕ್ಯಾಪ್ಸಿಕಂ) ಹಾಕಿ ಸೌಟ್ ನಿಂದ ನಿಧಾನವಾಗಿ ಗೊಟಾಯಿಸಿ. ದೊಡ್ಡ ಮೆಣಸು ಮೃದುವಾಗುವವರೆಗೆ ಹುರಿಯಬೇಕು. ಮೊಸರಿಗೆ ಸಕ್ಕರೆ ಹಾಕಿ ಸ್ಪೂನ್ ನಿಂದ ಚೆನ್ನಾಗಿ ಕಲಸಿರಿ. ಅದಕ್ಕೆ ಸ್ವಲ್ಪ ಉಪ್ಪು ಹಾಕಿ ಮಿಶ್ರ ಮಾಡಬೇಕು. ಈಗ ಹುರಿದ ಕ್ಯಾಪ್ಸಿಕಂ ಮಿಶ್ರಣವನ್ನು ಮೊಸರಿನ ಮಿಶ್ರಣಕ್ಕೆ ಸೇರಿಸದರೆ ರಾಯತ ರೆಡಿ. ರುಚಿ ರುಚಿಯಾದ ರಾಯತ ಸವಿಯಿರಿ.