October 2, 2026
Friday, October 2, 2026
spot_img

ವಿಮಾನದಲ್ಲಿ ತಮಗಾದ ಅನುಭವವನ್ನು ಪ್ರಧಾನಿ ಮೋದಿ ಜೊತೆ ಹಂಚಿಕೊಂಡ ಕ್ಯಾಪ್ಟನ್‌ ಸ್ಮಿತ್‌ ಮಚ್ಚಾರ್‌! ವಿಡಿಯೋ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದುಬೈನಿಂದ ಟೆಲ್‌ ಅವಿವ್‌ಗೆ ಹೊರಟಿದ್ದ ಫ್ಲೈ ದುಬೈ ವಿಮಾದಲ್ಲಿ ಸಹ ಪೈಲಟ್‌ ನಡೆಸಿದ ದಾಳಿಯ ಪ್ರಯತ್ನವನ್ನು ವಿಫಲಗೊಳಿಸಿ, ಪ್ರಯಾಣಿಕರನ್ನು ರಕ್ಷಿಸಿದ ಭಾರತದ ಪೈಲಟ್‌ ಕ್ಯಾಪ್ಟನ್‌ ಸ್ಮಿತ್‌ ಮಚ್ಚಾರ್‌ ಜೊತೆ ಪ್ರಧಾನಿ ಮೋದಿ ಅವರು ಮಾತನಾಡಿದ್ದಾರೆ.

ಆ ಸಮಯದಲ್ಲಿ ಏನಾಯ್ತು? ಹೇಗೆ ದಾಳಿ ಮಾಡಿದರು? ಹೇಗೆ ಧೈರ್ಯ ತೆಗೆದುಕೊಂಡೆ ಎನ್ನುವ ವಿಷಯಗಳ ಬಗ್ಗೆ ಸ್ಮಿತ್‌ ಪ್ರಧಾನಿ ಜೊತೆ ಮುಕ್ತವಾಗಿ ಮಾತನಾಡಿದ್ದಾರೆ. ಏನೇ ಆಗಲಿ ನಿಮ್ಮ ಧೈರ್ಯವನ್ನು ನಾನು ಶ್ಲಾಘಿಸುತ್ತೇನೆ. ನಿಮ್ಮ ಪ್ರಾಣವನ್ನು ಒತ್ತೆಯಿಟ್ಟು ಪ್ರಯಾಣಿಕರ ಜೀವವನ್ನು ಕಾಪಾಡಿದಿದ್ದೀರಿ. ಶೀಘ್ರವಾಗಿ ಚೇತರಿಸಿಕೊಳ್ಳಿ ಎಂದು ಹೇಳಿದ್ದಾರೆ.

ನಿನ್ನೆಯಷ್ಟೇ ಪ್ರಧಾನಿ ಸ್ಮಿತ್‌ ಕುಟುಂಬದ ಜೊತೆ ಮಾತನಾಡಿದ್ದು, ಭಾರತದಿಂದ ಎಲ್ಲ ರೀತಿಯ ಸಹಕಾರ ನೀಡುತ್ತೇವೆ ಎಂದು ಧೈರ್ಯ ತುಂಬಿದ್ದರು. ಸದ್ಯ ಟ್ವಿಟರ್‌ನಲ್ಲಿ ಲೈವ್‌ ವಿಡಿಯೋ ಪ್ರಸಾರವಾಗುತ್ತಿದ್ದು, ಜನರು ವೀಕ್ಷಣೆಗೆ ಮುಕ್ತವಾಗಿದೆ.

Must Read