Thursday, February 2, 2023

Latest Posts

ದನಗಳ ಬೇಟೆ ಆಡುತ್ತಿದ್ದ ಹುಲಿಯ ಸೆರೆ: ನಿಟ್ಟುಸಿರು ಬಿಟ್ಟ ರೈತರು!

ಹೊಸದಿಗಂತ, ವರದಿ, ಜೋಯಿಡಾ:

ತಾಲೂಕಿನ ಉಳವಿ ಗ್ರಾಮ ಪಂಚಾಯತ ವ್ಯಾಪ್ತಿಯ ಚಂದ್ರಾಳಿ , ಹೆಂಡಕೊಳ, ಮೋಳೆ, ಊರುಗಳಲ್ಲಿ ಸಾಕು ದನಗಳ ಬೇಟೆ ಆಡುತ್ತಿದ್ದ ಹುಲಿ ಯನ್ನು ಗುಂದ ಅರಣ್ಯ ಇಲಾಖೆಯ ಅಧಿಕಾರಿಗಳು ಸೆರೆ ಹಿಡಿದು ರೈತರಿಗೆ ನೆಮ್ಮದಿ ತಂದಿದ್ದಾರೆ.
ಕಳೆದ 15 ದಿನಗಳಿಂದ ಹುಲಿಯೊಂದು ರೈತರ ದನದ ಕೊಟ್ಟಿಗೆ ಗೆ ಬಂದು ರಾತ್ರಿ ವೇಳೆ ದನಗಳನ್ನು ಹಿಡಿದು ಹೊತ್ತೊಯ್ಯುತ್ತಿತ್ತು ಇಲ್ಲವೇ ಕಚ್ಚಿ ಅರೆಜೀವ ಮಾಡಿ ಹೋಗುತ್ತಿತ್ತು ಇದರಿಂದ ಬಡ ರೈತರು ಕಂಗಾಲಾಗಿಹೋಗಿದ್ದರು ಅರಣ್ಯ ಇಲಾಖೆಯ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದರು .
ಚಂದ್ರಾಳಿಯ ದತ್ತಾ ಶಳಪೇಕರ್ ಇವರ 3ದನಗಳು ರಾಮ ಬಿರಂಗಾತ ಇವರ 2ದನಗಳು ಈಗಾಗಲೇ ಹುಲಿಯ ದಾಳಿಗೆ ಬಲಿಯಾಗಿದ್ದವು ಶನಿವಾರ ಮತ್ತೆ ರಾತ್ರಿ ವೇಳೆ 2 ದನಗಳ ಮೇಲೆ ಹುಲಿ ಆಕ್ರಮಣ ಮಾಡಿದ ಕಾರಣ ರೈತರ ನಿದ್ದೆ ಹಾರಿ ಹೋಗಿತ್ತು. ರವಿವಾರ ಕನ್ನಡ ಸಾಹಿತ್ಯ ಸಮ್ಮೇಳನ ಕ್ಕೆಂದು ಉಳವಿಗೆ ಜಿಲ್ಲೆ ಯ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬಂದಿದ್ದರು ಆಗ ಉಳವಿ ಗ್ರಾಮ ಪಂಚಾಯತ ಉಪಾಧ್ಯಕ್ಷ ಮಂಜುನಾಥ ಮೊಕಾಶಿ ಸಚಿವರಿಗೆ ಮನವಿ ನೀಡಿ ತಾಲೂಕಿನ ಜನರ ಸ್ಥಿತಿ ಯನ್ನ ವಿವರಿಸಿ ಹೇಳಿ ದ್ದರು ಆಗ ಕಾಳಿ ಹುಲಿ ಯೋಜನಾ ನಿರ್ದೇಶಕ ಮಾರಿಯೋ ಕ್ರಿಸ್ತ ರಾಜ ಅವರಿಗೆ ದೂರವಾಣಿ ಕರೆ ಮಾಡಿ ಕೂಡಲೇ ಹುಲಿ ಯನ್ನು ಬಂದಿಸಿ ಎತ್ತಂಗಡಿ ಮಾಡಿ ಇಲ್ಲಿ ಜನರಿಗೆ ಬದುಕಲು ಬಿಡಿ ಎಂದು ಸಚಿವರು ಹೇಳಿದ್ದರು ಸಚಿವರ ಮಾತಿನಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಬೋನಿನ ಮೂಲಕ ಹುಲಿ ಹಿಡಿದಿದ್ದಾರೆ ಹುಲಿಯನ್ನು ಹಂಪೆಯ ಮೃಗಾಲಯಕ್ಕೆ ಕಳಿಸಿ ಕೊಡಲಾಗಿದೆ.
ವಲಯ ಅರಣ್ಯಾಧಿಕಾರಿ ರವಿಕಿರಣ ಸಂಪಗಾವಿ. ಹುಲಿ ರೈತರ ದನ ಗಳಿಗೆ ತೊಂದರೆ ಕೊಡುತ್ತಿತ್ತು ಮತ್ತೆ ದನಕರು ಗಳಿಗೆ ಜನರಿಗೆ ತೊಂದರೆ ಆಗಬಾರದು ಎಂದು ಇಲ್ಲಿಂದ ಕಳಿಸಿ ಕೊಟ್ಟಿದ್ದೇವೆ ಎನ್ನುತ್ತಾರೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!