SHOCKING VIDEO| ಮದುವೆ ದಿಬ್ಬಣದ ಮೇಲೆ ಹರಿದ ಕಾರು: ಓರ್ವ ಸಾವು, 31 ಮಂದಿ ಗಂಭೀರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮದುವೆ ದಿಬ್ಬಣದಲ್ಲಿ ಕಾರೊಂದು ನುಗ್ಗಿ ಸಂಭ್ರಮವನ್ನೆಲ್ಲಾ ನುಚ್ಚು ನೂರು ಮಾಡಿದೆ. ಕಾರಿನ ರೂಪದಲ್ಲಿ ಬಂದ ಜವರಾಯ ವ್ಯಕ್ತಿಯನ್ನು ಬಲಿಪಡೆದು 31ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಹರಿದ್ವಾರದಲ್ಲಿ ಈ ದುಷ್ಕೃತ್ಯ ನಡೆದಿದೆ. ಇದ್ದಕ್ಕಿದ್ದಂತೆ, ಸ್ಕಾರ್ಪಿಯೋ ಮದುವೆಯ ಮೆರವಣಿಗೆಯ ಮೇಲೆ ಹರಿದಿದೆ. ಏನಾಯಿತು ಎಂದು ತಿಳಿಯುವ ಮೊದಲೇ ಒಬ್ಬರು ಪ್ರಾಣಪಕ್ಷಿ ಹಾರಿಹೋಗಿದೆ. ಖುಷಿಯಲ್ಲಿದ್ದ ಮದುಎವ ಮನೆ ತೀವ್ರ ದುಃಖದಲ್ಲಿ ಮುಳುಗಿದೆ. ಈ ಅಪಘಾತಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಶುಕ್ರವಾರ ರಾತ್ರಿ ವರನ ಮೆರವಣಿಗೆ ನಡೆಯುತ್ತಿದೆ. ವರನ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ರಸ್ತೆಯಲ್ಲಿ ಮೆರವಣಿಗೆಯಲ್ಲಿ ಹೋಗುತ್ತಿದ್ದಾರೆ. ಸಂಗೀತಕ್ಕೆ ತಕ್ಕಂತೆ ಕುಣಿಯುತ್ತಾ ಹೆಜ್ಜೆ ಹಾಕುತ್ತಿರುವಾಗ ವಧುವಿನ ಕುಟುಂಬಸ್ಥರು ಮೆರವಣಿಗೆಯಲ್ಲಿ ಬರುತ್ತಿದ್ದ ಮದುವೆ ತಂಡವನ್ನು ಸ್ವಾಗತಿಸಲು ಸಿದ್ಧತೆ ನಡೆಸಿದ್ದರು.

ಇದೇ ವೇಳೆ ಬಹದರಾಬಾದ್‌ನಿಂದ ವೇಗವಾಗಿ ಬಂದ ಕಾರು ಮದುವೆ ದಿಬ್ಬಣದ ಮೇಲೆ ಹರಿದಿದೆ. ಈ ಘಟನೆಯಿಂದ ಕುಪಿತಗೊಂಡ ಮದುವೆ ಮನೆ ಸದಸ್ಯರು ಕಾರು ಚಾಲಕನನ್ನು ಹಿಡಿದು ಥಳಿಸಿದ್ದಾರೆ. ಕೋಪದಿಂದ ಕಾರನ್ನು ಸಹ ಧ್ವಂಸಗೊಳಿಸಿದ್ದಾರೆ. ವಿಷಯ ತಿಳಿದ ಪೊಲೀಸರು ಬಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕಾರಿನ ಚಾಲಕನನ್ನು ಬಂಧಿಸಲಾಗಿದೆ. ಕಾರು ಚಾಲಕ ಪಾನಮತ್ತನಾಗಿ ವಾಹನ ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿದೆ ಎಂದು ತನಿಖೆಯಿಂದ ಬಯಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!