Tuesday, March 28, 2023

Latest Posts

ಹಜ್‌ ತೀರ್ಥಯಾತ್ರೆ 2023 : ಆನ್‌ಲೈನ್‌ ಅರ್ಜಿ ಸಲ್ಲಿಸಲು ಮಾ.10ರ ವರೆಗೆ ಅವಕಾಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಭಾರತದ ಹಜ್ ಸಮಿತಿಯು ಹಜ್ ತೀರ್ಥಯಾತ್ರೆ 2023ಗೆ ತೆರಳುವವರಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಯಾತ್ರಿಗಳು ಫೆಬ್ರವರಿ 10,2023 ರಿಂದ ಮಾರ್ಚ್ 10,2023ರೊಳಗೆ ಆನ್‌ಲೈನ್‌ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಅರ್ಹ ಯಾತ್ರಾರ್ಥಿಗಳು ಡಿಸೆಂಬರ್ 31, 2023ರ ವರೆಗೆ ಮಾನ್ಯವಾಗಿರುವ ಪಾಸ್‌ಪೋರ್ಟ್‌ಗಳನ್ನು ಹೊಂದಿರಬೇಕು. ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ಯಾತ್ರಿಕರು ತಮ್ಮ ಪಾಸ್‌ಪೋರ್ಟ್‌ಗಳ ಮೊದಲ ಮತ್ತು ಕೊನೆಯ ಪುಟಗಳ ಜೆರಾಕ್ಸ್ ಪ್ರತಿಗಳನ್ನು ತೆಲಂಗಾಣ ಹಜ್ ಸಮಿತಿ ಕಚೇರಿಗೆ ಸಲ್ಲಿಸಬೇಕಾಗುತ್ತದೆ. ಅರ್ಜಿ ಪ್ರಕ್ರಿಯೆಯ ಕುರಿತು ಇನ್ನಷ್ಟು ತಿಳಿದುಕೊಳ್ಳಲು ತೆಲಂಗಾಣ ಹಜ್ ಸಮಿತಿಯ ಕಚೇರಿಯ ಸಿಬ್ಬಂದಿಯನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ 040-232987932023 ಸಂಖ್ಯೆಯನ್ನು ಸಂಪರ್ಕಿಸಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!