ಕಾರು ಅಪಘಾತ: ಸೈರಸ್ ಮಿಸ್ತ್ರಿ ಸಾವಿನ ಹಿಂದಿನ ರಹಸ್ಯ ಬಯಲು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಟಾಟಾ ಸನ್ಸ್​ ಕಂಪನಿಯ ಮಾಜಿ ಚೇರ್ಮನ್‌ ಸೈರಸ್ ಮಿಸ್ತ್ರಿ ಹಾಗೂ ಅವರ ಜೊತೆಗಿದ್ದ ಪ್ರಯಾಣಿಕನಿಗೆ ನಡೆದ ಕಾರು ಅಪಘಾತದಲ್ಲಿ ಅವರು ಸೀಟ್ ಬೆಲ್ಟ್​ ಧರಿಸಿರಲಿಲ್ಲ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಅತಿವೇಗದ ಚಾಲನೆ ಹಾಗೂ ಚಾಲಕನ ತಪ್ಪಿನಿಂದ ಅಪಘಾತ ನಡೆದಿದೆ. ಅಪಘಾತ ಸಂಭವಿಸಿದ ಸಮಯದಲ್ಲಿ ಐಷಾರಾಮಿ ಕಾರು ಅತಿ ವೇಗವಾಗಿ ಚಲಿಸುತ್ತಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಚಾರೋಟಿ ಚೆಕ್​ ಪೋಸ್ಟ್ ಅನ್ನು ದಾಟಿದ್ದ ಮರ್ಸಿಡಿಸ್ ಕಾರುಮುಂದೆ ಕೇವಲ 9 ನಿಮಿಷಗಳಲ್ಲಿ 20 ಕಿಲೋಮೀಟರ್ ದೂರ ಕ್ರಮಿಸಿತ್ತು. ನಂತರ ಸೂರ್ಯ ನದಿಯ ಸೇತುವೆ ಮೇಲೆ ರಸ್ತೆ ಡಿವೈಡರ್​ಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಸೈರಸ್ ಮಿಸ್ತ್ರಿ ಹಾಗೂ ಜಹಾಂಗೀರ್ ಪಂಡೋಲೆ ಸ್ಥಳದಲ್ಲೇ ಮೃತಪಟ್ಟಿದ್ದರು.

ಮಿಸ್ತ್ರಿ ಅವರು ಅಹಮದಾಬಾದ್‌ನಿಂದ ಮುಂಬೈಗೆ ಹಿಂದಿರುಗುತ್ತಿದ್ದಾಗ ಮಧ್ಯಾಹ್ನ 2.30 ಕ್ಕೆ ಈ ದುರಂತ ಸಂಭವಿಸಿದೆ. ಮುಂಬೈ ಮೂಲದ ಸ್ತ್ರೀರೋಗ ತಜ್ಞೆ ಅನಾಹಿತಾ ಪಂಡೋಲೆ (55) ಕಾರು ಚಲಾಯಿಸುತ್ತಿದ್ದರು. ಅಪಘಾತದಲ್ಲಿ ಆಕೆ ಮತ್ತು ಡೇರಿಯಸ್ ಪಾಂಡೋಲೆ (60) ಗಂಭೀರವಾಗಿ ಗಾಯಗೊಂಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!