ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಬುಲ್ ನಲ್ಲಿರುವ ರಷ್ಯಾದ ರಾಯಭಾರಿ ಕಚೇರಿಯ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಘಟನೆಯಲ್ಲಿ ಇಬ್ಬರು ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ ಮತ್ತು 11 ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.
ಸಾವನ್ನಪ್ಪಿದವರರು ರಷ್ಯಾ ರಾಜತಾಂತ್ರಿಕ ಮತ್ತು ರಾಯಭಾರ ಕಚೇರಿಯ ಭದ್ರತಾ ಸಿಬ್ಬಂದಿಯಾಗಿದ್ದರು ಎನ್ನಲಾಗಿದೆ.
ರಷ್ಯಾದ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ, ಕಾಬೂಲ್ ಕಾಲಮಾನ ಬೆಳಗ್ಗೆ 10:50ರ ಸುಮಾರಿಗೆ ರಾಯಭಾರಿ ಕಚೇರಿಯ ಕಾನ್ಸುಲರ್ ವಿಭಾಗದ ಪ್ರವೇಶ ದ್ವಾರದ ಬಳಿ ಅಪರಿಚಿತ ಉಗ್ರನೊಬ್ಬ ಸ್ಫೋಟಕ ಸಾಧನವನ್ನು ಸ್ಫೋಟಿಸಿದ್ದಾನೆ ಎನ್ನಲಾಗಿದೆ.