ಕಾರ್, ಬೈಕ್ ಮಾರಾಟ ಚುರುಕಾಗಿಸಿದ ಹಬ್ಬದ ಸೀಸನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಬ್ಬದ ಸೀಸನ್‌ನಿಂದಾಗಿ ಕಾರ್, ಬೈಕ್ ಮಾರಾಟ ಹೆಚ್ಚಾಗಿದೆ. ಹಬ್ಬದ ದಿನದಂದೇ ವಾಹನ ಮನೆಗೆ ಬರಲಿ ಎನ್ನುವವರ ಸಂಖ್ಯೆ ಹೆಚ್ಚಾಗಿದ್ದು, ಮಾರಾಟಗಾರರಿಗೆ ಇದು ಉತ್ತಮ ಸಮಯವಾಗಿದೆ.

2019ಕ್ಕೆ ಹೋಲಿಸಿದರೆ 2022 ಅಕ್ಟೋಬರ್‌ನಲ್ಲಿ ಪ್ರಯಾಣಿಕರ ವಾಹನಗಳು, ವಾಣಿಜ್ಯ ವಾಹನಗಳು ಮತ್ತು ಟ್ರ್ಯಾಕ್ಟರ್‌ಗಳ ನೋಂದಣಿ 35-66% ರಷ್ಟು ಹೆಚ್ಚಾಗಿದೆ. ಹಬ್ಬದ ಸೀಸನ್ ವಾಹನ ಮಾರಾಟಗಾರರಿಗೆ ವರದಾನವಾಗಿದೆ. ಮತ್ತೊಂದೆಡೆ ದ್ವಿಚಕ್ರ ವಾಹನಗಳು ಕೂಡ 2019ಕ್ಕೆ ಹೋಲಿಸಿದರೆ ಶೇ.5ರಷ್ಟು ಹೆಚ್ಚು ನೋಂದಣಿ ಕಂಡಿದೆ.

ಸೆಪ್ಟೆಂಬರ್ 26ರಂದು ನವರಾತ್ರಿಯಿಂದ ಹಬ್ಬದ ಸೀಸನ್ ಆರಂಭವಾಗಿದ್ದು, ಇದೀಗ ಅಕ್ಟೋಬರ್ 24ರ ದೀಪಾವಳಿಗೆ ಮುಕ್ತಾಯವಾಗಿದೆ. ಈ ಅವಧಿಯಲ್ಲಿ ಕಳೆದ ವರ್ಷಕ್ಕಿಂತ ಶೇ. 34-44ರಷ್ಟು ವಾಹನಗಳ ನೋಂದಣಿ ಸಂಖ್ಯೆ ಹೆಚ್ಚಾಗಿದೆ ಎಂದು ವರದಿ ಹೇಳಿದೆ.

ಇನ್ನು ಟು ವೀಲರ್ ವಿಭಾಗದಲ್ಲಿ 2018ರಲ್ಲಿ ಗರಿಷ್ಠ ಮಟ್ಟದ ನೋಂದಣಿಯಾಗಿತ್ತು. ನಂತರ ಮೂರು ವರ್ಷಗಳು ಟು ವೀಲರ್ ಖರೀದಿಸುವವ ಸಂಖ್ಯೆ ಕುಸಿದಿತ್ತು. ಇದೀಗ ಟು ವೀಲರ್ ವಿಭಾಗದಲ್ಲಿಯೂ ಚೇತರಿಕೆ ಕಾಣುತ್ತಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಶೇ.5 ರಷ್ಟು ನೋಂದಣಿಗಳು ಹೆಚ್ಚಾಗಿವೆ.

ಭಾರತದಲ್ಲಿ ಹಬ್ಬಗಳಿಗೆ ಇರುವ ಪ್ರಾಮುಖ್ಯತೆಯಿಂದ ಈ ಸಮಯ ವಾಹನ ಖರೀದಿಗೆ ಉತ್ತಮ ಎನ್ನುವುದು ಜನರ ನಂಬಿಕೆ. ಹೀಗಾಗಿ ಈ ಸಮಯದಲ್ಲಿ ವಾಹನಗಳಿಗೆ ಬೇಡಿಕೆ ಹೆಚ್ಚಿದೆ. ದಶಕಗಳಲ್ಲಿ ಅತ್ಯಂತ ಕೆಟ್ಟ ದಿನಗಳನ್ನು ಕಂಡ ನಂತರ ವಾಹನ ವಲಯ ಇದೀಗ ನಿಧಾನವಾಗಿ ಚೇತರಿಕೆ ಕಾಣುತ್ತಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!