ವಿಶಾಖಪಟ್ಟಣದಲ್ಲಿ 10ನೇ ತರಗತಿಯ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆ: ದೊರೆತ ಪತ್ರದಲ್ಲಿ ಏನಿದೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಶಾಖಪಟ್ಟಣದ ಕ್ವೀನ್ ಮೇರಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆಯಾಗಿದು, ಈ ಘಟನೆ ಸ್ಥಳೀಯವಾಗಿ ಭಾರೀ ಆತಂಕ ಮೂಡಿಸಿದೆ. ಬುಧವಾರ (ನವೆಂಬರ್ 2, 2022) ಸಂಜೆಯಿಂದ ನಾಲ್ವರು ವಿದ್ಯಾರ್ಥಿನಿಯರು ಕಾಣಿಸುತ್ತಿಲ್ಲ ಎಂದು ಪೋಷಕರು ವಿಶಾಖಪಟ್ಟಣಂ ಒನ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಾಲಕಿಯರ ರಹಸ್ಯ ಭೇದಿಸುವ ಕಾರ್ಯ ಆರಂಭಿಸಿದ್ದಾರೆ. ಪೊಲೀಸರು ಮತ್ತು ಸ್ವಯಂಸೇವಕ ಗುಂಪುಗಳು ವಿದ್ಯಾರ್ಥಿನಿಯರ ಫೋಟೋ ಹಿಡಿದು ಹುಡುಕಾಡುತ್ತಿದ್ದಾರೆ. ವಿದ್ಯಾರ್ಥಿನಿಯರು ಕಂಡ ಕೂಡಲೇ ತಕ್ಷಣ ಮಾಹಿತಿ ನೀಡುವಂತೆ ತಿಳಿಸಿದ್ದಾರೆ ಕೇಳಲಾಗಿದೆ.

ಈ ನಾಲ್ವರು ವಿದ್ಯಾರ್ಥಿಗಳ ನಾಪತ್ತೆಗೆ ಅವರ ನಿರ್ಧಾರವೇ ಕಾರಣ ಎಂಬ ಪತ್ರವೊಂದು ಸಿಕ್ಕಿದೆ. ವಿದ್ಯಾರ್ಥಿಗಳು ಬರೆದಿದ್ದಾರೆಂದು ನಂಬಲಾದ ಪತ್ರವೊಂದು ದೊರೆತಿದ್ದು, ಜೀವನದಲ್ಲಿ ಎತ್ತರವಾಗಿ ಬೆಳೆಯುತ್ತೇವೆ ಎಂದು ಬರೆದಿರುವುದನ್ನು ನೋಡಿದರೆ ಇಷ್ಟು ಚಿಕ್ಕ ವಯಸ್ಸಿಗೆ ಅವರ ಈ ನಿರ್ಧಾರ ಅವರ ಮುಗ್ಧತೆಗೆ ಸಾಕ್ಷಿಯಾಗಿದೆ.

ನಾಪತ್ತೆಯಾಗಿರುವ ವಿದ್ಯಾರ್ಥಿನಿಯರು ಬರೆದಿರುವ ಪತ್ರದ ಸಾರಾಂಶ ಹೀಗಿದೆ: ನಮ್ಮನ್ನು ಹುಡುಕಬೇಡಿ, ನಮ್ಮ ಕಾಲಿನ ಮೇಲೆ ನಿಂತುಕೊಳ್ಳಲು ದೂರ ಹೋಗುತ್ತಿದ್ದೇವೆ. ಯಾವುದೇ ಕಾರಣಕ್ಕೂ ನಿಮಗೆ ತೊಂದರೆ ಕೊಡಲು ನಾವು ಬಯಸುವುದಿಲ್ಲ. ನಾವು ನಮ್ಮ ಜೀವನ ನಡೆಸಲು ಹೋಗುತ್ತಿದ್ದೇವೆ. ನಾವು ಹುಡುಗರ ಜೊತೆ ಹೋಗುತ್ತಿದ್ದೇವೆ ಎಂದುಕೊಳ್ಳಬೇಡಿ, ಬಹಳಷ್ಟು ಎತ್ತರಕ್ಕೆ ಬೆಳೆಯಲು ನಿರ್ಧಾರ ಮಾಡಿದ್ದೇವೆ. ನಾವು ಎಲ್ಲಿದ್ದರೂ ನಿಮ್ಮ ಬಗ್ಗೆ ಯೋಚಿಸುತ್ತೇವೆ. ಒಳ್ಳೆ ಸ್ಥಾನಕ್ಕೆ ಬಂದ ಮೇಲೆ ನಿಮ್ಮೆದುರು ಬರುತ್ತೇವೆ ಅಲ್ಲಿವರೆಗೂ ನಮಗಾಗಿ ಹುಡಕಬೇಡಿ ಎಂದು ಬರೆದಿದ್ದಾರೆ.

ಈ ಪತ್ರವನ್ನು ಕಾಣೆಯಾದ ವಿದ್ಯಾರ್ಥಿಗಳು ಬರೆದಿದ್ದಾರೆಯೇ? ಅಥವಾ ದಾರಿ ತಪ್ಪಿಸಲು ಬೇರೆ ಯಾರಾದರೂ ಬರೆದಿದ್ದಾರೋ? ಅಥವಾ ಅವರಿಂದ ಬಲವಂತವಾಗಿ ಪತ್ರ ಬರೆಸಿ ಅಪಹರಿಸಲಾಗಿದೆಯೇ? ಎಂಬ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!