ಸೊಮಾಲಿಯಾದಲ್ಲಿ ಕಾರ್‌ ಬಾಂಬ್‌ ದಾಳಿ: 100ಕ್ಕೂ ಹೆಚ್ಚು ಜನರ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಸೊಮಾಲಿಯಾದ ರಾಜಧಾನಿಯ ಜನನಿಬಿಡ ಪ್ರದೇಶದಲ್ಲಿ ಬಾಂಬ್‌ ಸ್ಫೋಟ ಸಂಭವಿಸಿದ್ದು ಘಟನೆಯಲ್ಲಿ 100ಕ್ಕೂ ಹೆಚ್ಚುಜನ ಮೃತಪಟ್ಟಿದ್ದಾರೆ. ಸಾವನ್ನಪ್ಪಿರುವವರ ಸಂಖ್ಯೆ ಇದಕ್ಕಿಂತಲೂ ಹೆಚ್ಚಾಗಬಹುದು ಎಂದು ಅಲ್ಲಿನ ಅಧ್ಯಕ್ಷರು ಹೇಳಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಸ್ಫೋಟದ ಸಮಯದಲ್ಲಿ ಸುತ್ತಮುತ್ತಲಿದ್ದ 300ಕ್ಕೂಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅವರು ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ. ಅಕ್ಟೋಬರ್ 2017 ರಲ್ಲಿ ಅದೇ ಸ್ಥಳದಲ್ಲಿ ಟ್ರಕ್ ಬಾಂಬ್ ಸ್ಫೋಟದಲ್ಲಿ 500 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ನಂತರ ಇದು ಸೊಮಾಲಿಯಾದಲ್ಲಿ ನಡೆದ ಅತ್ಯಂತ ಭೀಕರ ದಾಳಿಯಾಗಿದೆ.

ಸ್ಫೋಟದ ರುವಾರಿ ಎಂದು ಸೋಮಾಲಿಯಾ ಸರ್ಕಾರವು ಅಲ್-ಖೈದಾ-ಸಂಬಂಧಿತ ಅಲ್-ಶಬಾಬ್ ಉಗ್ರಗಾಮಿ ಗುಂಪನ್ನು ದೂಷಿಸಿದೆ. ಈ ಗುಂಪು ಸೊಮಾಲಿಯಾವನ್ನು ಗುರಿಯಾಗಿಸಿಕೊಂಡು ಆಗಾಗ ದಾಳಿ ನಡೆಸುತ್ತಿರುವುದು ವರದಿಯಾಗಿದೆ.

“ದೇಶವು ಅಲ್-ಶಬಾಬ್‌ನೊಂದಿಗೆ ಯುದ್ಧದಲ್ಲಿ ನಿರತವಾಗಿದೆ ಮತ್ತು ನಾವು ಗೆಲ್ಲುತ್ತಿದ್ದೇವೆ. ಸೇನೆಯ ಗುಂಪುಗಳೊಂದಿಗೆ ಸರ್ಕಾರವು ದೇಶದ ಹೆಚ್ಚಿನ ಭಾಗಗಳನ್ನು ಹೊಂದಿರುವ ಉಗ್ರಗಾಮಿಗಳ ವಿರುದ್ಧ ಹೊಸ ದಾಳಿಯಲ್ಲಿ ತೊಡಗಿದೆ” ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!