ಹೊಸದಿಗಂತ ವರದಿ,ವಿಜಯಪುರ:
ನಗರದಲ್ಲಿ ವಕೀಲರೊಬ್ಬರ ಬೈಕ್‌ಗೆ ಕಾರ್ ಡಿಕ್ಕಿ ಹೊಡಿಸಿ, ಬರೋಬ್ಬರಿ ಎರಡು ಕಿಮೀ ಎಳೆದೊಯ್ದು ಭೀಕರ ಹತ್ಯೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಐದು ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದ ಪ್ರಮುಖ ಆರೋಪಿ ತುಳಸಿರಾಮ ಹರಿಜನ ಹಾಗೂ ಅಲೆಕ್ಸ್ ಗೊಲ್ಲರ, ಷಣ್ಮುಖ ನಡುವಿನಕೇರಿ, ಪ್ರಕಾಶ ಗೊಲ್ಲರ, ಮುರಿಗೇಶ ಉಳ್ಳಾಗಡ್ಡಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.
ಹತ್ಯೆಯಾಗಿರುವ ಇಲ್ಲಿನ ವಕೀಲ ರವಿ ಮೇಲಿನಕೇರಿ ಹಾಗೂ ಪ್ರಮುಖ ಆರೋಪಿ ತುಳಸಿರಾಮ ಹರಿಜನ ಮಧ್ಯೆ ಜಗಳವಾಗಿತ್ತು. ಇದರಿಂದ ಆರೋಪಿಗಳು ಬೈಕ್‌ನಲ್ಲಿ ತೆರಳುತ್ತಿದ್ದ ರವಿ ಮೇಲಿನಕೇರಿಗೆ ಕಾರಿನಿಂದ ಡಿಕ್ಕಿಪಡಿಸಿ, ಭೀಕರವಾಗಿ ಹತ್ಯೆ ಮಾಡಿದ್ದರು. ಈ ಸಂಬಂಧ ವಿಜಯಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.