Monday, September 26, 2022

Latest Posts

ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ: ಸವಾರ ಸಾವು

ಹೊಸದಿಗಂತ ವರದಿ, ಗದಗ:

ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ವಾಹನ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಗರದ ಹೊಂಬಳ ರಸ್ತೆಯಲ್ಲಿ ಭಾನುವಾರ ಮಧ್ಯಾಹ್ನ ಜರುಗಿದೆ.
ಮೃತ ದುರ್ದೈವಿ ಸ್ಥಳೀಯ ಹಾಳದಿಬ್ಬದ ನಿವಾಸಿ ಮಂಜುನಾಥ ಕಲಬಂಡಿ (27) ಎಂಬುವರಾಗಿದ್ದು. ನಗರದ ಹೊರವಲಯದಲ್ಲಿರುವ ಪಶುವಿಶ್ವವಿದ್ಯಾಲಯದ ಹತ್ತಿರ ಘಟನೆ ಜರುಗಿದ್ದು, ಹೊಲದಲ್ಲಿದ್ದ ಕುಟುಂಬದವರಿಗೆ ಬುತ್ತಿಕೊಡಲು (ಊಟದ ಗಂಟು) ಟಿವಿಎಸ್ ದ್ವಿಚಕ್ರ ವಾಹನದಲ್ಲಿ ತೆರಳುತ್ತಿರುವ ಸಂದರ್ಭದಲ್ಲಿ ಹಿಂದಿನಿಂದ ಬಂದ ಕೆ.ಎ.19 ಎಂಎ9815 ಸಂಖ್ಯೆಯ ಕಾರೊಂದು ಡಿಕ್ಕಿ ಹೊಡೆದಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!