ವಿದೇಶಿ ಇ-ಸಿಗರೇಟ್ ಸ್ಮಗ್ಲಿಂಗ್: ವಿಮಾನ ನಿಲ್ದಾಣದಲ್ಲಿ ಆರೋಪಿ ಕಸ್ಟಮ್ಸ್ ಅಧಿಕಾರಿಗಳ ವಶಕ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಲಗೇಜ್​ ಬ್ಯಾಗ್​ನಲ್ಲಿ ವಿದೇಶಿ ಇ-ಸಿಗರೇಟ್ ಸ್ಮಗ್ಲಿಂಗ್ ಮಾಡುತ್ತಿದ್ದ ಪ್ರಯಾಣಿಕ ನನ್ನ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳಿಗೆ ಸೆರೆಹಿಡಿದಿದ್ದಾರೆ.

ಬಂಧಿತ ಆರೋಪಿಯಿಂದ 16 ಲಕ್ಷ ಮೌಲ್ಯದ 84 ಸಿಗರೇಟ್ ಪ್ಯಾಕ್​ಗಳನ್ನು ವಶಕ್ಕೆ ಪಡೆಯಲಾಗಿದೆ.

ಆಗಸ್ಟ್ 27 ರಂದು ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕನನ್ನ ಖಚಿತ ಮಾಹಿತಿ ಮೇರೆಗೆ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಇ ಸಿಗರೇಟ್ ಸ್ಮಗ್ಲಿಂಗ್ ಪ್ರಕರಣ ಪತ್ತೆಯಾಗಿದೆ.

ಬಂಧಿತ ಆರೋಪಿ ಲಗೇಜ್ ಬ್ಯಾಗ್​ನಲ್ಲಿ ಮರೆಮಾಚಿ ವಿದೇಶಿ ಇ ಸಿಗರೇಟ್ ಅಕ್ರಮ ಕಳ್ಳಸಾಗಾಣಿಕೆಯ ಯತ್ನ ನಡೆಸಿದ್ದಾನೆ. ಇದರಲ್ಲಿ ಒಟ್ಟು 16. 38 ಲಕ್ಷ ಮೌಲ್ಯದ 84 ಇ-ಸಿಗರೇಟ್ ಪ್ಯಾಕ್​ನಲ್ಲಿದ್ದ 840 ಇ-ಸಿಗರೇಟ್​ಗಳನ್ನ ವಶಕ್ಕೆ ಪಡೆಯಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!