Monday, March 4, 2024

SHOCKING | ಚೇಲಾವರ ಫಾಲ್ಸ್’ನಲ್ಲಿ ಮುಳುಗಿ ಯುವಕ ಸಾವು

ಹೊಸದಿಗಂತ ವರದಿ, ಮಡಿಕೇರಿ:

ಚೇಲಾವರ ಫಾಲ್ಸ್ ನೋಡಲು ಬಂದಿದ್ದ ಯುವಕನೊಬ್ಬ ನೀರು ಪಾಲಾದ ಘಟನೆ ಚೆಯ್ಯಂಡಾಣೆ ಸಮೀಪದ ಚೇಲಾವರ ಫಾಲ್ಸ್’ನಲ್ಲಿ ಭಾನುವಾರ ನಡೆದಿದೆ.

ಮೃತನನ್ನು ಕೇರಳದ ಮಟ್ಟನ್ನೂರು ನಿವಾಸಿ, ಮಹಮ್ಮದ್ ಅಶ್ರಫ್ ಎಂಬವರ ಪುತ್ರ ರಶೀದ್( 25) ಎಂದು ಗುರುತಿಸಲಾಗಿದೆ.
ತನ್ನ ಮೂವರು ಸ್ನೇಹಿತರೊಂದಿಗೆ ಕೊಡಗಿನ ಪ್ರವಾಸಿ ತಾಣಗಳ ವೀಕ್ಷಣೆಗೆ ಬಂದಿದ್ದ ರಶೀದ್, ಚೇಲಾವರ ಜಲಪಾತದಲ್ಲಿ ಸ್ನಾನಕ್ಕೆಂದು ಇಳಿದಾಗ ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವುದಾಗಿ ಹೇಳಲಾಗಿದೆ.

ಜಲಪಾತದಿಂದ ಮೃತದೇಹವನ್ನು ಮೇಲೆತ್ತುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಯಶಸ್ವಿಯಾಗಿದ್ದು, ನಾಪೋಕ್ಲು ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಶ್ರೀಧರ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!