3ಸಾವಿರ ಉದ್ಯೋಗಿಗಳನ್ನು ಹೊರಹಾಕಲಿದೆ ಕಾರು ತಯಾರಕ ಫೋರ್ಡ್ ಕಂಪನಿ

ಹೊಸದಿಗಂತ ಡಿಜಿಟಲ ಡೆಸ್ಕ್:‌
ಕಂಪನಿಯ ಉದ್ಯೋಗಿಗಳಲ್ಲಿ 3 ಸಾವಿರ ಉದ್ಯೋಗಿಗಳನ್ನು ಹಾಗೂ ಗುತ್ತಿಗೆ ಕಾರ್ಮಿಕರನ್ನು ವಜಾ ಗೊಳಿಸುತ್ತಿರುವುದಾಗಿ ಯುಎಸ್ ಮೂಲದ ಕಾರು ತಯಾರಕ ಫೋರ್ಡ್ ಮೋಟಾರ್ ಕಂಪನಿ ಹೇಳಿದೆ. ಈ ಕಡಿತವು ಪ್ರಾಥಮಿಕವಾಗಿ ಯುಎಸ್, ಕೆನಡಾ ಮತ್ತು ಭಾರತದಲ್ಲಿನ ಸಿಬ್ಬಂದಿಗಳ ಮೇಲೆ ಪರಿಣಾಮ ಬೀರಲಿದೆ.

ದಿ ವಾಲ್ ಸ್ಟ್ರೀಟ್ ಜರ್ನಲ್ ಪ್ರಕಾರ ಫೋರ್ಡ್‌ ಕಂಪನಿಯು ತನ್ನ ಉದ್ಯೋಗಿಗಳಿಗೆ ಈಗಾಗಲೇ ಅಂತರಿಕ ಈಮೇಲ್‌ ಕಳುಹಿಸಿದ್ದು ಸಂಬಳ ಪಡೆಯುತ್ತಿರುವ ಮತ್ತು ಏಜೆನ್ಸಿ ಕಾರ್ಮಿಕರಿಗೆ ಕಡಿತದ ಕುರಿತು ತಿಳಿಸುವುದಾಗಿ ಹೇಳಿದೆ.

ಉದ್ದೇಶಿತ 3,000 ಕಡಿತಗಳಲ್ಲಿ ಸುಮಾರು 2,000 ದಷ್ಟು ಡಿಯರ್‌ಬಾರ್ನ್, ಮಿಚಿಗನ್‌ನಲ್ಲಿ ಸಂಬಳದ ಉದ್ಯೋಗಗಳಾಗಿವೆ. ಉಳಿದ 1,000 ಉದ್ಯೋಗಿಗಳು ಹೊರಗಿನ ಏಜೆನ್ಸಿಗಳೊಂದಿಗೆ ಗುತ್ತಿಗೆ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಕಂಪನಿ ತಿಳಿಸಿದೆ.

ಕಾರ್ಯನಿರ್ವಾಹಕ ಅಧ್ಯಕ್ಷ ಬಿಲ್ ಫೋರ್ಡ್ ಮತ್ತು ಮುಖ್ಯ ಕಾರ್ಯನಿರ್ವಾಹಕ ಜಿಮ್ ಫಾರ್ಲೆ ಸಹಿ ಮಾಡಿದ ಇಮೇಲ್ ನಲ್ಲಿ ಫೋರ್ಡ್ ತನ್ನ ವಾಹನಗಳಿಗೆ ಸುಧಾರಿತ ಸಾಫ್ಟ್‌ವೇರ್ ಅನ್ನು ಅಭಿವೃದ್ಧಿಪಡಿಸುವಂತಹ ತನ್ನ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿರುವುದರಿಂದ ಅದು ಕಾರ್ಯನಿರ್ವಹಿಸುವ ವಿಧಾನವನ್ನು ಬದಲಾಯಿಸುತ್ತಿದೆ ಮತ್ತು ಸಂಪನ್ಮೂಲಗಳನ್ನು ಮರುಹಂಚಿಕೆ ಮಾಡುತ್ತಿದೆ ಎನ್ನಲಾಗಿದೆ.
ಉದ್ಯೋಗ ಕಡಿತ ಸೆಪ್ಟೆಂಬರ್ 1 ರಿಂದ ಜಾರಿಗೆ ಬರಲಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!