ಹೊಸದಿಗಂತ ವರದಿ,ಅಂಕೋಲಾ:
ಕಾರು ಪಲ್ಟಿಯಾಗಿ ಓರ್ವ ಮೃತಪಟ್ಟಿದ್ದು, ಮೂವರು ಗಾಯಗೊಂಡ ಘಟನೆ ತಾಲೂಕಿನ ಬೊಗ್ರಿಬೈಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ 63 ಸಂಭವಿಸಿದೆ.
ಕಾರವಾರ ಮೂಲದ ಸದ್ಯ ಹುಬ್ಬಳ್ಳಿಯಲ್ಲಿ ವಾಸವಾಗಿದ್ದ ನಿವೃತ್ತ ಬ್ಯಾಂಕ್ ಉದ್ಯೋಗಿ ಸುರೇಶ ಶಂಕರ ರಾಣೆ(80) ಮೃತ ವ್ಯಕ್ತಿಯಾಗಿದ್ದು ಅವರ ಪತ್ನಿ ಶೈಲಾ ಸುರೇಶ ರಾಣೆ, ಸಂಬಂಧಿ ಸಂಜೀವ ಎಸ್ ನಾಯ್ಕ ಮತ್ತು ಶ್ವೇತಾ ಸಂಜೀವ ನಾಯ್ಕ ಎನ್ನುವವರು ಗಾಯಗೊಂಡಿದ್ದು ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂಬಂಧಿಯೋರ್ವರ ಪುಣ್ಯಸ್ಮರಣೆ ಕಾರ್ಯಕ್ಕೆ ಆಗಮಿಸಿದ್ದ ಇವರು ಮರಳಿ ಹುಬ್ಬಳ್ಳಿ ಕಡೆ ಸಾಗುತ್ತಿದ್ದ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ದನ ಅಡ್ಡಬಂದ ಕಾರಣ ಕಾರಿನ ಮೇಲಿನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿರುವುದಾಗಿ ತಿಳಿದು ಬಂದಿದೆ.
ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪಿ.ಎಸ್.ಐ ಸುನೀಲ ಹುಲ್ಲೋಳ್ಳಿ ಪ್ರಕರಣ ದಾಖಲಿಸಿದ್ದಾರೆ.