ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಮಾಧ್ಯಮದಲ್ಲಿ ಆಶ್ಚರ್ಯಕರವಾದ, ನಗುವನ್ನು ತರಿಸುವ ವೀಡಿಯೊಗಳು ಹರಿದಾಡುತ್ತಲೇ ಇರುತ್ತವೆ. ಇದರ ಸಾಲಿಗೆ ಹೆಣ್ಣುಮಕ್ಕಳು ಕಾರು ಪಾರ್ಕಿಂಗ್ ವಿಡಿಯೋ ಕೂಡ ಸೇರಿದೆ. ಸಾಮಾನ್ಯವಾಗಿ ಹೆಣ್ಮಕ್ಕಳು ವಾಹನ ಚಲಾಯಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ವಿಡಿಯೋಗಳು, ಫೋಟೋಗಳ ಹರಿದಾಡಿವೆ. ಇಂಥದ್ದೇ ವಿಡಿಯೋವೊಂದು ಇದೀಗ ವೈರಲ್ ಆಗಿದೆ.
ರಸ್ತೆಯಲ್ಲಿ ಸಾಲಾಗಿ ಕಾರುಗಳು ಪಾರ್ಕಿಂಗ್ ಆಗಿವೆ. ಖಾಲಿ ಇರುವ ಸ್ಥಳದಲ್ಲಿ ಕಾರು ನಿಲ್ಲಿಸಲು ಬಂದ ಇಬ್ಬರು ಹೆಂಗಳೆಯರು ಪಟ್ಟ ಪಾಡು ಅಷ್ಟಿಷ್ಟಲ್ಲ. ಕಾರನ್ನು ಅತ್ತಿಂದಿತ್ತ, ಇತ್ತಿಂದತ್ತ ತಿರುಗಿಸಿ ಏನೇನೋ ಮಾಡಿ, ಕೊನೆಗೆ ಕಾರಿಳಿದು ಸ್ಥಳ ಹಾಗೂ ಕಾರಿನ ಉದ್ದ ಎಷ್ಟು ಎಂದು ಅಡಿಗಳ ಲೆಕ್ಕ ಹಾಕಿದ್ದಾರೆ. ಇಬ್ಬರು ಯುವತಿಯರ ಈ ರೀತಿಯ ವಿಚಿತ್ರ ಕಾರು ಪಾರ್ಕಿಂಗ್ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
हर किसी को इस महिला की तरह होना चाहिए…#TrendingNow #Trending #viralvideos2022 #ViralVideo pic.twitter.com/5Irz8FpTv7
— Narendra Singh (@NarendraNeer007) November 19, 2022