ಕಂದಕಕ್ಕೆ ಉರುಳಿ ಬಿದ್ದ ಕಾರ್: ಸ್ಥಳದಲ್ಲೇ ಆರು ಮಂದಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಮ್ಮು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಕಾರೊಂದು ಕಂದಕಕ್ಕೆ ಬಿದ್ದಿದ್ದು, ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿ ಇಕೋ ಕಾರು ಕಂದಕಕ್ಕೆ ಬಿದ್ದಿದೆ.
ಅಬ್ದುಲ್ ಲತೀಫ್, ಅಬ್ದುಲ್ ರೆಹಮಾನ್, ಅತಾ ಮಹಮ್ಮದ್, ಇನಾಮ್, ಮೊಹಮ್ಮದ್ ಅಖ್ರಾಮ್ ಹಾಗೂ ಜಮೀರ್ ಮೃತರು. ಘಟನೆ ಮಾಹಿತಿ ದೊರಕುತ್ತಿದ್ದಂತೆಯೇ ರಾಷ್ಟ್ರೀಯ ರೈಫಲ್ ಸಿಬ್ಬಂದಿ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!