ಕೆರೆಬಿಯನ್​ ಲೀಗ್​ ಮಹಿಳಾ ಟೀಂ ಖರೀದಿಸಿದ ಬಾಲಿವುಡ್​ ನಟ ಶಾರುಖ್​ ಖಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್​ ನಟ ಶಾರೂಖ್​ ಒಡೆತನದ ನೈಟ್​​ ರೈಡರ್ಸ್​ ಗ್ರೂಪ್​ ಇದೀಗ ಮಹಿಳಾ ಕ್ರಿಕೆಟ್​ಗೂ ಕಾಲಿಟ್ಟಿದ್ದು, ಕೆರೆಬಿಯನ್​ ಲೀಗ್‌ನ ಮಹಿಳಾ ಟಿ-20 ತಂಡವನ್ನು ಶಾರೂಖ್​ ತಮ್ಮದಾಗಿಸಿಕೊಂಡಿದ್ದಾರೆ.
ಈ ಬಗ್ಗೆ ಶಾರೂಖ್​ ಟ್ವೀಟ್​ ಮಾಡಿದ್ದು, ತಮ್ಮ ನೈಟ್ ರೈಡರ್ಸ್ ಫ್ರಾಂಚೈಸಿ ಇದೀಗ ಮೊದಲ ಬಾರಿಗೆ ಮಹಿಳಾ ತಂಡದ ಮಾಲೀಕತ್ವವನ್ನು ಪಡೆದುಕೊಂಡಿದೆ ಎಂದು ಬರೆದುಕೊಂಡಿದ್ದಾರೆ.
ಮಹಿಳಾ ತಂಡಕ್ಕೆ ‘ಟ್ರಿನ್‌ಬಾಗೊ ನೈಟ್ ರೈಡರ್ಸ್’ ಎಂದು ಹೆಸರಿಸಲಾಗಿದೆ. ಆಗಸ್ಟ್​ 30ರಿಂದ ಆರಂಭವಾಗಲಿರುವ ಮಹಿಳಾ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಈ ತಂಡ ಕಣಕ್ಕಿಳಿಯಲಿದೆ.
“ಇದು ಕೆಕೆರೈಡರ್ಸ್​, ಎಡಿಕೆ ರೈಡರ್ಸ್​ ಫ್ರಾಂಚೈಸಿಗೆ ಸಂತಸದ ವಿಚಾರ. ಇದೀಗ ಟಿಕೆ ರೈಡರ್ಸ್​ ತಂಡ ನಮ್ಮದಾಗಿದೆ. ಮಹಿಳಾ ತಂಡವನ್ನು ಮೈದಾನದಲ್ಲಿ ಲೈವ್​ ಆಗಿ ನೋಡಲು ಕಾದಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!