ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೆನಿಸ್ನ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ಸ್ನಲ್ಲಿ ಹಾಲಿ ಚಾಂಪಿಯನ್ ನೋವಾಕ್ ಜೋಕೋವಿಕ್ರನ್ನು ಮಣಿಸಿ ಇದೇ ಮೊದಲ ಬಾರಿಗೆ ಕಾರ್ಲೊಸ್ ಅಲ್ಕರಾಜ್ ವಿಂಬಲ್ಡನ್ಗೆ ಮುತ್ತಿಕ್ಕಿದ್ದಾರೆ.
ವಿಶೇಷವೆಂದರೆ ಅಲ್ಕರಾಜ್ ವಿಂಬಲ್ಡನ್ ಫೈನಲ್ಸ್ ಪ್ರವೇಶಿಸಿದ್ದು ಇದೇ ಮೊದಲು. ಬ್ಯಾಟಲ್ ಆಫ್ ಜನರೇಷನ್ ಎಂದೇ ವ್ಯಾಖ್ಯಾನಿಸಲ್ಪಟ್ಟ ಪಂದ್ಯದಲ್ಲಿ ಗೆಲುವು ಸಾಧಿಸಿದ ಅಲ್ಕರಾಜ್ ಅತ್ಯಂತ ಕಿರಿಯ ಸ್ಪರ್ಧಿಯಾಗಿದ್ದಾರೆ.
ಜೋಕೋವಿಕ್ ಅತಿ ಹೆಚ್ಚು ಅನುಭವ ಹೊಂದಿದ್ದು, ಕಾರ್ಲೋಸ್ ಅತಿ ಕಿರಿಯ ಹಾಗೂ ಮೊದಲ ಬಾರಿಗೆ ವಿಂಬಲ್ಡನ್ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದರು. ಐದು ಸುತ್ತಿನಲ್ಲಿಯೂ ಜೋಕೋವಿಕ್ ಅವರನ್ನು ಅಲ್ಕರಾಜ್ ಮಣಿಸಿದ್ದಾರೆ.