ಕ್ರಿಸ್ಮಸ್ ಟ್ರೀ ಮೇಲೆ ಬೆಕ್ಕುಗಳ ಆಟದ ವಿಡಿಯೋ ವೈರಲ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:‌ 

ಮನೆಯಲ್ಲಿ ಸಾಕುಪ್ರಾಣಿಗಳು ಮಾಡುವ ಚೇಷ್ಟೆ ಅಷ್ಟಿಷ್ಟಲ್ಲ. ಅದರಲ್ಲೂ ಬೆಕ್ಕುಗಳು ಎರಡು ಸಾಕು ಬೆಕ್ಕುಗಳಿದ್ದರೆ ಸಾಕು ಅವು ಮಾಡುವ ಚೇಷ್ಟೆಗೆ ಸುಸ್ತೋಸುಸ್ತು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಎರಡು ಸಾಕು ಬೆಕ್ಕುಗಳು ಒಟ್ಟಿಗೆ ಕ್ರಿಸ್ಮಸ್ ಟ್ರೀ ಮೇಲೆ ಕಣ್ಣಾಮುಚ್ಚಾಲೆ ಆಡುತ್ತಿವೆ. ಅವರು ಆ ಮರವನ್ನು ಆಟದ ಮೈದಾನದಲ್ಲಿರುವ ಮರ ಎಂದುಕೊಂಡಿವೆಯೋ ಏನೋ?

ಸಾಮಾಜಿಕ ಮಾಧ್ಯಮದಲ್ಲಿ 33 ಸೆಕೆಂಡುಗಳ ಅವಧಿಯ ವೀಡಿಯೊ ಎರಡು ಬೆಕ್ಕುಗಳು ಕ್ರಿಸ್ಮಸ್ ಟ್ರೀಯನ್ನು ಬಹುತೇಕ ನಾಶಪಡಿಸುವುದನ್ನು ನೋಡಬಹುದು. ಮರದ ತುದಿ ಏರಿದ ಬೆಕ್ಕು ನೇತಾಡುತ್ತಿದ್ದ ಆಭರಣಗಳು, ಹೂಮಾಲೆ, ಮತ್ತು ಕ್ಯಾಂಡಿ ಕಡ್ಡಿಗಳನ್ನು ಕೆಳಗೆ ಬೀಳಿಸಿವೆ. ಅತ್ತಿಂದಿತ್ತ, ಇತ್ತಿಂದತ್ತ ಹಾರುತ್ತಾ ತಮ್ಮದೇ ಲೋಕದಲ್ಲಿ ಮುಳುಗಿವೆ.

ಟ್ವಿಟರ್‌ನಲ್ಲಿ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ, ಸುಮಾರು 35,000 ವೀಕ್ಷಕರು ಈ ವೀಡಿಯೊವನ್ನು ವೀಕ್ಷಿಸಿದ್ದಾರೆ. ಈ ವೀಡಿಯೊ ಪ್ರಸ್ತುತ ಟ್ರೆಂಡಿಂಗ್ ಆಗಿದೆ. 27 ಸಾವಿರಕ್ಕೂ ಹೆಚ್ಚು ನೆಟ್ಟಿಗರು ತಮ್ಮ ಹಾಸ್ಯದ ಕಾಮೆಂಟ್‌ಗಳೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!