ಮೆಸ್ಸಿ ಮ್ಯಾಜಿಕ್: ಆಸ್ಟ್ರೇಲಿಯಾ ವಿರುದ್ಧ ಗೆದ್ದು ಕ್ವಾಟರ್ ಫೈನಲ್ ಗೆ ಲಗ್ಗೆ ಇಟ್ಟ ಅರ್ಜೆಂಟೀನಾ

ಹೊಸದಿಗಂತ ಡಿಜಿಟಲ್ ಡೆಸ್ಕ್
ಫುಟ್ಬಾಲ್ ದಿಗ್ಗ ಜ ಲಿಯೋನೆಲ್ ಮೆಸ್ಸಿ ತನ್ನ ಒಟ್ಟಾರೆ 1,000 ನೇ ಪಂದ್ಯದಲ್ಲಿ ಮ್ಯಾಜಿಕ್ ಮಾಡುವ ಮೂಲಕ ಅರ್ಜೆಂಟೀನಾ ತಂಡವನ್ನು ಕ್ವಾಟರ್ ಫೈನಲ್ ಗೆ ಏರಿಸಿದ್ದಾರೆ‌.
ಫಿಫಾ ವಿಶ್ವಕಪ್ ಫ್ರೀ ಕ್ವಾಟರ್ ಫೈನಲ್ ನಲ್ಲಿ ಅರ್ಜೆಂಟೀನಾ ಆಸ್ಟ್ರೇಲಿಯಾವನ್ನು 2-1 ಗೋಲುಗಳಿಂದ ಮಣಿಸುವ ಮೂಲಕ ಟೂರ್ನಿಯ ಮಹತ್ವದ ಘಟ್ಟಕ್ಕೆ ಕಾಲಿರಿಸಿತು. ಇದರೊಂದಿಗೆ ಮೆಸ್ಸಿ‌ ಬಳಗ ನೆದರ್ಲೆಂಡ್ಸ್‌ನೊಂದಿಗೆ ಕ್ವಾರ್ಟರ್-ಫೈನಲ್ ನಲ್ಲಿ ಕಾದಾಡಲಿದೆ.
ಮಾಂತ್ರಿಕ ಆಟಗಾರ ಮೆಸ್ಸಿ 35 ನೇ ನಿಮಿಷದಲ್ಲಿ‌ ಅದ್ಭುತ ಗೋಲು ಸಿಡಿಸಿ ಆಸ್ಟ್ರೇಲಿಯಾದ ತಂಡವನ್ನು ಒತ್ತಡಕ್ಕೆ ಸಿಲುಕಿಸಿದರು. ಜೂಲಿಯನ್ ಅಲ್ವಾರೆಜ್ 57 ನೇ ನಿಮಿಷದಲ್ಲಿ ಗೆಲುವಿಗೆ ಅಗತ್ಯವಾಗಿದ್ದ ನಿರ್ಣಾಯಕ ಗೋಲು ಸಿಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!