ಬೀದರ್ ಉತ್ಸವದಲ್ಲಿ ವಿವಿಧ ತಳಿಯ ಜಾನುವಾರುಗಳ ಪ್ರದರ್ಶನ

ಹೊಸದಿಗಂತ ವರದಿ ಬೀದರ್ :

ಬೀದರ್ ಉತ್ಸವ-2023ರ ಅಂಗವಾಗಿ ಪಶು ಪ್ರದರ್ಶನವನ್ನು ಬೀದರ್ ಕೋಟೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದು,  ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ ವಿವಿಧ ತಳಿಯ ಜಾನುವಾರುಗಳಾದ ದೇವಣಿ ತಳಿ, ಖಿಲಾರಿ, ರೆಡ್ ಕೆದಾರ, ಎಚ್.ಎಫ್.ಝರಾ, ಗಿರ್ ತಳಿಯ ಎಮ್ಮೆ ಮತ್ತು ಕೋಣ ಪ್ರದರ್ಶನದಲ್ಲಿ ಆಕರ್ಷಣಿಯ ಕೇಂದ್ರವಾಗಿದ್ದವು.

ಮರ‍್ರಾ, ನಾಗಪುರಿ ಮತ್ತು ಪಂಡರಪುರಿ ಜಾನುವಾರುಗಳು ಭಾಗಿಯಾಗಿದ್ದು ಜೊತೆಗೆ ಕಂಗೋರಿ, ಬಿಟಲ್, ಮೊಲ, ಆಡುಗಳು, ಕೋಳಿ, ಕುದುರೆಗಳು ಈ ಪ್ರದರ್ಶನದಲ್ಲಿ ಭಾಗಿಯಾಗಿದ್ದವು. ಜಾನುವಾರುಗಳ ಪ್ರದರ್ಶನ ಕುರಿತು ಬೀದರ್ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ.ನರಸಪ್ಪಾ ಅವರು ಮಾಹಿತಿ ನೀಡಿ, ಪ್ರತಿಯೊಂದು ತಳಿಯ ಜಾನುವಾರುಗಳಿಗೆ ಪ್ರಥಮ ಬಹುಮಾನ 3000 ರೂ., ದ್ವಿತೀಯ ಬಹುಮಾನ 2000 ರೂ. ಹಾಗೂ ತೃತೀಯ ಬಹುಮಾನ 1000 ರೂ.

ಭಾಗವಹಿಸಿದ ಜಾನುವಾರುಗಳಿಗೆ 2 ಕೆ.ಜಿ. ಪಶು ಆಹಾರ ನೀಡುವುದರ ಜೊತೆಗೆ ಅದರ ಮಾಲೀಕರಿಗೆ ಉತ್ಸವದಲ್ಲಿ ಭಾಗವಹಿಸಿದ ಪ್ರಮಾಣ ಪತ್ರ ಮತ್ತು ನೆನಪಿನ ಕಾಣಿಕೆ ನೀಡಲಾಗುವುದು ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!