ಏಳನೇ ತರಗತಿ ವಿದ್ಯಾರ್ಥಿನಿ ಮೇಲೆ ಬಸ್ ಚಾಲಕನಿಂದ ಹಲ್ಲೆ: ಆಡಳಿತ ಮಂಡಳಿಯ ನಿರ್ಧಾರವೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶಾಲಾ ಬಸ್ಸಿನಲ್ಲಿದ್ದ 7 ನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಬಸ್ ಚಾಲಕ ಹಲ್ಲೆ ನಡೆಸಿದ್ದು, ಇದಕ್ಕೆ ಸಂಬಂಧಿಸಿದಂತೆ ಶಾಲಾ ಆಡಳಿತ ಮಂಡಳಿ ಕ್ರಮ ಕೈಗೊಂಡಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕಳೆದ ಮಂಗಳವಾರ ಅಮೆರಿಕದ ಮಿಚಿಗನ್ ಡೆಟ್ರಾಯಿಟ್ ನಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಏಳನೇ ತರಗತಿಯಲ್ಲಿ ಓದುತ್ತಿರುವ 12 ವರ್ಷದ ಬಾಲಕಿ ತನ್ನ ಶಾಲಾ ಬಸ್ ಚಾಲಕನೊಂದಿಗೆ ಜಗಳವಾಡಿದ್ದಾಳೆ. ಈ ಜಗಳದಲ್ಲಿ ಚಾಲಕ ಬಾಲಕಿಯ ಮೇಲೆ ಹಲ್ಲೆ ನಡೆಸಿದ್ದು, ಇಬ್ಬರೂ ಬಸ್ಸಿನ ಸೀಟಿನ ಮೇಲೆ ಬಿದ್ದು ಒಬ್ಬರಿಗೊಬ್ಬರು ಹೊಡೆದಿದ್ದಾರೆ. ಹಲ್ಲೆ ನಡೆಸಿದ ಬಸ್ ಚಾಲಕನ ಮೇಲೆ ಕ್ರಮ ಕೈಗೊಂಡ ಶಾಲಾ ಆಡಳಿತ ಮಂಡಳಿ ಆತನನ್ನು ಅಮಾನತುಗೊಳಿಸಿದ್ದಾರೆ.

ಬಸ್ ಚಾಲಕನೇ ಅನಗತ್ಯವಾಗಿ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೋಷಕರು ಒತ್ತಾಯಿಸಿದರು. ಬಾಲಕಿ ತನ್ನ ಮಾತು ಕೇಳದ ಕಾರಣ ಈ ಘಟನೆ ನಡೆದಿದೆ ಎಂದು ಚಾಲಕ ಸ್ಪಷ್ಟನೆ ನೀಡಿದ್ದಾರೆ. ಸೀಟಿನ ಮೇಲೆ ಕುಳಿತುಕೊಳ್ಳುವಂತೆ ಬಾಲಕಿಗೆ ಹೇಳಿದರೂ ಆಕೆ ಕೇಳದೆ ಆತನ ಮೇಲೆ ಎರಗಿದ್ದರಿಂದ ಹಲ್ಲೆ ನಡೆಸಿರುವುದಾಗಿ ಚಾಲಕ ಹೇಳಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!