ಹೊಸದಿಗಂತ ವರದಿ ವಿಜಯಪುರ:
ಮಹಾನಗರ ಪಾಲಿಕೆ ಚುನಾವಣೆ ಚುರುಕಿನಿಂದ ನಡೆಯುತ್ತಿದ್ದು, ಪಾಲಿಕೆಯಲ್ಲಿ ಬಿಜೆಪಿಗೆ ಬಹುಮತ ಸಿಗುವುದು ಖಚಿತ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ನಗರದ ಅಶ್ರಮ ರಸ್ತೆಯ ವಾರ್ಡ್ ನಂಬರ್ 11 ರ ಮತಗಟ್ಟೆ ಸಂಖ್ಯೆ 95 ಕ್ಕೆ ಕುಟುಂಬ ಸಮೇತರಾಗಿ ಶಾಸಕ ಯತ್ನಾಳ ಆಗಮಿಸಿ, ಮತದಾನ ಮಾಡಿ, ಬಳಿಕ ಮಾತನಾಡಿದ ಅವರು,
ಈ ಭಾರಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೇ, ಮತದಾರರಲ್ಲಿ ಗೊಂದಲ ಬೇಡ. ಒಬ್ಬರ ಮತದಾನ ಎರಡು ಮೂರು ಕಡೆಗೆ ಇದ್ದು, ಇದನ್ನು ಒಂದು ಕಡೆಗೆ ಮಾಡಿದೆ. ಹೀಗಾಗಿ ಕೆಲವು ಲೋಪದೋಷಗಳು ಆಗಿವೆ. ಅದನ್ನು ತಹಶೀಲ್ದಾರರು, ಜಿಲ್ಲಾಡಳಿತ ಪರಿಶೀಲನೆ ಮಾಡುತ್ತದೆ ಎಂದರು.