Wednesday, September 27, 2023

Latest Posts

ʻಕಾವೇರಿ ವಿವಾದ: ಸಂಸತ್‌ ಅಧಿವೇಶನದ ವೇಳೆಯೇ ಪ್ರಧಾನಿ ಭೇಟಿಗೆ ಸರ್ವಪಕ್ಷ ನಿಯೋಗʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೆಆರ್‌ಎಸ್‌ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡುವ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಭೇಟಿಗೆ ಸರ್ವಪಕ್ಷ ನಿಯೋಗ ತೆರಳುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಬೆಂಗಳೂರಿನಲ್ಲಿ ಇಂದು ಮಾಧ್ಯಮವರೊಂದಿಗೆ ಮಾತನಾಡಿದ ಡಿಕೆಶಿ…ಇದೀಗ ಸಂಸತ್‌ ವಿಶೇಷ ಅಧಿವೇಶನ ನಡೆಯುತ್ತಿದ್ದು, ಅಧಿವೇಶನ ಮುಗಿಯುವ ವೇಳೆಗೆ ಸರ್ವಪಕ್ಷ ನಿಯೋಗ ಭೇಟಿ ಮಾಡಬೇಕೆಂದು ಚಿಂತನೆ ನಡೆಸಿದ್ದೇವೆ. ಆದರೆ, ಇದುವರೆಗೂ ಪ್ರಧಾನಿ ಭೇಟಿಗೆ ಅವಕಾಶ ನೀಡಿಲ್ಲ, ಪತ್ರ ಬರೆದಿದ್ದರೂ ಅದಕ್ಕೂ ಪ್ರತಿಕ್ರಿಯೆ ಬಂದಿಲ್ಲ. ಇತ್ತ ಜಲಾಶಯದಲ್ಲಿ ಕುಡಿಯಲು ಹಾಗೂ ನಮ್ಮ ರೈತರ ಬೆಳೆಗಳಿಗೆ ಸಾಕಾಗುವಷ್ಟು ಮಾತ್ರ ನೀರಿದೆ ಎಂಬುದನ್ನು ನ್ಯಾಯಾಲಯಕ್ಕೂ ಮನವರಿಕೆ ಮಾಡಿಕೊಡುತ್ತಿದ್ದೇವೆ ಎಂದರು.

ಈ ನಡುವೆ ಇಂದು ತಮಿಳುನಾಡು ನಿಯೋಗ ಈಗಾಗಲೇ ಕಾವೇರಿ ವಿಚಾರ ಮಾತನಾಡಲು ದೆಹಲಿಗೆ ತೆರಳಿದ್ದು, ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗುವುದಾಗಿ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!