Tuesday, October 3, 2023

Latest Posts

`ನಾನು ಸಂಸದನಾಗಿ ಬಂದಾಗ…ʼ ಹಳೆ ಸಂಸತ್‌ ಕಟ್ಟಡದ ನೆನಪು ಸ್ಮರಿಸಿದ ಪ್ರಧಾನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಲೋಕಸಭೆಯಲ್ಲಿ ಸಂಸತ್‌ ವಿಶೇಷ ಅಧಿವೇಶನ ಕುರಿತು ಮಾತನಾಡಿದ ಪ್ರಧಾನಿ..2014ರಲ್ಲಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ ಕ್ಷಣವನ್ನು ಸ್ಮರಿಸಿದರು. ಅಂದು ಮೊದಲ ಬಾರಿಗೆ ಸಂಸತ್‌ ಪ್ರವೇಶಿಸಿದಾಗ ಪ್ರಜಾಪ್ರಭುತ್ವದ ದೇಗುಲದ ಗೌರವಕ್ಕೆ ತಲೆಬಾಗಿ ನಮಸ್ಕರಿಸಿದ್ದೆ. ಸಂಸತ್‌ ಭವನದ ಮೆಟ್ಟಿಲೇರುತ್ತೇನೆಂದು ಊಹಿಸಿಯೂ ಇರಲಿಲ್ಲ ಎಂದು ಪ್ರಧಾನಿ ಭಾವುಕರಾದರು.

ಮಂಗಳವಾರ ಸಂಸತ್ತು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತಿರುವುದನ್ನು ಉಲ್ಲೇಖಿಸಿ, “ವಿದಾಯ ಹೇಳುತ್ತಿದ್ದೇನೆ. ಈ ಕ್ಷಣ  ಭಾವನಾತ್ಮಕವಾಗಿದೆ” ಎಂದರು. ಈ ಕಟ್ಟಡದೊಂದಿಗೆ ಹಲವು ಕಹಿ-ಸಿಹಿ ನೆನಪುಗಳಿವೆ. ನಾವೆಲ್ಲರೂ ಸಂಸತ್ತಿನಲ್ಲಿ ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳಿಗೆ ಸಾಕ್ಷಿಯಾಗಿದ್ದೇವೆ. ಅದೇ ಸಮಯದಲ್ಲಿ ನಾವು ‘ಪರಿವಾರ ಭಾವ’ಕ್ಕೆ ಸಾಕ್ಷಿಯಾಗಿದ್ದೇವೆ ಎಂದರು.

ಸಂಸತ್‌ ಭವನಕ್ಕೆ ಮಾಜಿ ಪ್ರಧಾನಿಗಳ ಕೊಡುಗೆಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡರು. 2001ರಲ್ಲಿ ಸಂಸತ್ತಿನ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ನಿಭಾಯಿಸಿದವರ ಕೊಡುಗೆಯನ್ನು ಪ್ರಧಾನಿ ಸ್ಮರಿಸಿದರು. ʻಇದು ಕಟ್ಟಡದ ಮೇಲಿನ ದಾಳಿಯಲ್ಲ, ಪ್ರಜಾಪ್ರಭುತ್ವದ ತಾಯಿಯ ಮೇಲೆ, ನಮ್ಮ ಜೀವಂತ ಆತ್ಮದ ಮೇಲೆ ನಡೆದ ದಾಳಿ. ದೇಶವು ಆ ಘಟನೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಭಯೋತ್ಪಾದಕರ ವಿರುದ್ಧ ಹೋರಾಡುವಾಗ ಸಂಸತ್ತು ಮತ್ತು ಅದರ ಎಲ್ಲಾ ಸದಸ್ಯರನ್ನು ರಕ್ಷಿಸಲು ಗುಂಡೇಟಿಗೆ ತಮ್ಮ ಎದೆಯನ್ನೊಡ್ಡಿದವರಿಗೆ ಪ್ರಧಾನಿ ಶಿರಬಾಗಿ ನಮಸ್ಕರಿಸಿದರು.

ಇಂತಹ ಮಹಾನ್‌ ನೆನಪುಗಳಿರುವ ಕಡ್ಡವನ್ನು ಬಿಡ್ಡು ಹೋಗುವುದೂ ಕಷ್ಟವೇ ಸರಿ. ತಮ್ಮ ಸ್ವಂತ ಮನೆಯನ್ನು ಬಿಟ್ಟು ಹೋಗುವುದು ಮನೆಯವರಿಗೆ ಎಷ್ಟು ಕಷ್ಟವೋ..ಇದು ಹಾಗೆಯೇ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!