Monday, October 2, 2023

Latest Posts

ಡಿಎಂಕೆ ತೃಪ್ತಿ ಪಡಿಸಲು ತಮಿಳುನಾಡಿಗೆ ಕಾವೇರಿ ನೀರು: ಸರಕಾರ ವಿರುದ್ಧ ಯಡಿಯೂರಪ್ಪ ವಾಗ್ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯದಲ್ಲಿ ಈ ಬಾರಿ ಸರಿಯಾಗಿ ಮಳೆಯಾಗಿಲ್ಲ. ಈ ನಡುವೆ ಕಾವೇರಿ (Cauvery) ನೀರನ್ನು ತಮಿಳುನಾಡಿಗೆ ಬಿಡಲಾಗುತ್ತಿದೆ. ಇದು ‘ಡಿಎಂಕೆ ಪಕ್ಷವನ್ನು ತೃಪ್ತಿ ಪಡಿಸಲು ಮಾಡುತ್ತಿರುವ ಕೆಲಸ ಎಂದು ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ (BS Yadiyurappa) ಅವರು ಸರ್ಕಾರದ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.

ರಾಜ್ಯದಲ್ಲಿ ನೀರಿಲ್ಲ, ಮೇವಿಲ್ಲ, ಜನರು ಕಷ್ಟದಲ್ಲಿ ಇದ್ದಾರೆ. ಕಾವೇರಿ ನೀರಿನ ವಿಚಾರದಲ್ಲೂ ಸರ್ಕಾರ ರಾಜಕೀಯ ಮಾಡುತ್ತಿದೆ. ಈ ಹಿನ್ನಲೆ ಇಂಡಿಯಾ ಮೈತ್ರಿಕೂಟ ಬಲಪಡಿಸಲು ಸರ್ಕಾರ ನೀರು ಹರಿಸುತ್ತಿದೆ. ಸುಪ್ರೀಂಕೋರ್ಟ್​​ಗೆ ಮನವರಿಕೆ ಮಾಡಿಕೊಡಲು ಸರ್ಕಾರ ವಿಫಲವಾಗಿದೆ. ಇನ್ನಾದರೂ ಸುಪ್ರೀಂಕೋರ್ಟ್​ಗೆ ಸರ್ಕಾರ ಮನವರಿಕೆ ಮಾಡಲಿ, ರಾಜ್ಯ ಕಾಂಗ್ರೆಸ್​ ಸರ್ಕಾರ ಪರೋಕ್ಷವಾಗಿ ಡಿಎಂಕೆಗೆ ಸಹಕರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!